ಚುನಾವಣೆಯ ಹೊಸ್ತಿಲ್ಲೇ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮತ್ತೊಂದು ಆರೋಪವನ್ನು ಮಾಡಿ ಬೃಹತ್ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಪರವಿರುವ ಎಲ್ಲಾ ಮತಬಾಂದವರ ಹೆಸರುಗಳನ್ನೆಲ್ಲಾ ಅಳಿಸುವ ಪ್ರಯತ್ನಗಳು ಎಗ್ಗಿಲ್ಲದಂತೆ ನಡೆಯುತ್ತಿದ್ದು ಇದರಲ್ಲಿ ಬಿಜೆಪಿ ಪಕ್ಷದ ಕೆಲವು ನಾಯಕರ ಕೈವಾಡವಿರುವುದರ ಬಗ್ಗೆ ಅನುಮಾನವಿದ್ದು ತನಿಖೆ ನಡೆಯುತ್ತಿದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ಬೆಂಗಳೂರಿನ ಚಿಲುಮೆ ಸಂಸ್ಥೆ ಇದೇ ರೀತಿಯ ಕೆಲಸವನ್ನ ಮಾಡಿರುವುದು ತಿಳಿದುಬಂದಿತ್ತು’ ಎಂದು ಆರೋಪ ಮಾಡಿದ್ದು. ರಾಜ್ಯ ಹಿಂಬಾಗಿಲಿನಿಂದ ಅಧಿಕಾರದ ಚುಕ್ಕಾಣಿ ಹಿಡಿಯಲು ಅಮಿತ್ ಶಾ ಈ ರೀತಿಯ ಮಾರ್ಗವನ್ನು ಕಂಡುಕೊಂಡಿದ್ದಾರೆ ಸೋಲಿನ ಭಯದಲ್ಲಿ ಬಿಜೆಪಿ. ಇದರ ಕುರಿತಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರನ್ನ ನೀಡಲು ನಿರ್ಧಾರ ಮಾಡಿದ್ದೇವೆಂದು ಹೇಳಿದ್ದಾರೆ.