ಹುಬ್ಬಳ್ಳಿ: ಸಿಎಂ ಪೂರ್ತಿಯಾಗಿ ಮುಸ್ಲೀಂ ಮನುಷ್ಯರಾಗಿದ್ದಾರೆ ಎಂದು ಹೇಳಿಕೆ ನೀಡಿರುವ ಪ್ರತಾಪ್ ಸಿಂಹ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟನ್ನು ನೀಡಿದ್ದಾರೆ.
ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಪ್ರತಾಫ್‌ಸಿಂಹ ಒಬ್ಬ ಕೋಮುವಾದಿ ಮನುಷ್ಯ. ಕೋಮುವಾದಿಗಳಿಂದ ನಾವು ಏನನ್ನು ನಿರೀಕ್ಷಸಲು ಸಾಧ್ಯವಾಗುತ್ತದೆ. ಅವರಿಗೆ ದೇಶದ ಸಂವಿಧಾನದ ಬಗ್ಗೆ ಗೌರವವಿಲ್ಲ.ಕೋಮುವಾದ ಅವರ ವೃತ್ತಿ ಬದುಕು. ಜಾತಿ ಜಾತಿಗಳ ನಡುವೆ ಕೋಮುವಾದ ಸೃಷ್ಟಿಸಿ ರಾಜಕೀಯದಲ್ಲೇ ಉಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಜೆಪಿ ಪ್ರತಿಭಟನೆಯನ್ನುದ್ದೇಶಸಿ ಮಾತನಾಡಿದ ಸಿಎಂ, ಬಿಜೆಪಿಯವರು ಮಾತೆತ್ತಿದರೆ ಪ್ರತಿಭಟನೆ ಎಂದು ಬೀದಿಗೆ ಬಂದುಬಿಡುತ್ತಾರೆ. ಯಾವಾಗಲೂ ಸುಳ್ಳು ಆರೋಪ ಮಾಡುತ್ತಲೇ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂಧಿಸದ ಇವರು ಸಮಸ್ಯೆಯ ವಿಷಯಕ್ಕೆ ಪ್ರತಿಭಟನೆಯಂತೂ ಇವರು ಮಾಡುವುದಿಲ್ಲ. ಕೇವಲ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರವಧಿಯಲ್ಲಿ ಬೊಮ್ಮಾಯಿ ಭೂಮಿ ಒತ್ತುವರಿ ಮಾಡುತ್ತೇವೆ ಎಂದಿದ್ದರು.ಈಗ ಯಾಕೆ ವಿರೀಧ ಮಾಡುತ್ತಿದ್ದಾರೆ? ವಕ್ಫ್ ಇತ್ತೀಚಿನ ದಿಗಳದ್ದಲ್ಲ ಬದಲಾಗಿ ಬಿಜೆಪಿಯವರ ಸಮಯದಲ್ಲಿಯೂ ಕೂಡ ನೋಡಿಸ್ ನೀಡಿದ್ದರು . ನಾವೂ ನೀಡಿದ್ದೇವೆ.ಆದರೀಗ ನೋಟಿಸ್ ವಾಪಸ್ ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.