ರೋಹಿತ್ ವಿಮುಲ ಬರೆದಿದ್ದ ಒಂದು ಇಂಗೀಷ್ ಕವನದ ಅನುವಾದ.
ಒಂದು ದಿನ ನಿನಗನಿಸುವುದು ನಾನ್ಯಾಕೆ
ಆಕ್ರೋಶಿತನಾಗಿದ್ದೆನೆಂದು
ಆ ದಿನ ತಿಳಿಯುವೆ ನಾನ್ಯಾಕೆ ಬದುಕಲಿಲ್ಲ
ಸಮಾಜದ ಹಿತಾಸಕ್ತಿಗಳಿಗೆಂದು
ಒಂದು ದಿನ ತಿಳಿಯುವೆ ನಾನ್ಯಾಕೆ
ತಲೆ ಬಾಗಿಸಿದೆನೆಂದು
ಆ ದಿನ ತಿಳಿಯುವೆ ನೀನು
ಬೇಲಿಯಾಚೆಗೂ ಹರಡಿರುವ ಖೆಡ್ಡಗಳನ್ನು
ಒಂದು ದಿನ ನನ್ನ ಹುಡುಕುವೆ
ಇತಿಹಾಸದಲ್ಲಿ
ಮಬ್ಬು ಬೆಳಕಿನ ಪೀತ ಪತ್ರಿಕೆಗಳಲ್ಲಿ
ಆದರೂ ಬಯಸುವೆ ನಾ ಮುಗ್ಧನೆಂದು
ಆದರೆ…. ಆ ದಿನದ ರಾತ್ರಿ
ನೀ ನನ್ನ ನೆನೆವೆ, ಅನುಭವಿಸುವೆ
ನಗುವಿನಿ0ದೊಂದುಸಿರನೆಳೆವೆ…
ಆ ದಿನ… ನಾನೆದ್ದು ಬರುವೆ!
ಅನುವಾದ: ಪುನೀತ್ ಅಪ್ಪು
22-01-2016