ರಾಮ್‌ಲೀಲಾ ಮೈದಾನದಲ್ಲಿ ನಡೆದ ಜಮಿಯತ್‌ ಉಲೇಮಾ-ಇ-ಹಿಂದ್‌ ಅಧಿವೇಶನದಲ್ಲಿ ಅಧ್ಯಕ್ಷ ಮೊಹಮದ್‌ ಮದನಿ ಮುಸ್ಲೀಂರ ಅಲ್ಲಾ ಮತ್ತು ಓಂ ಎರಡು ಒಂದೇ ಎಂಬ ಅರ್ಥದಲ್ಲಿ ನೀಡಿದ ಹೇಳಿಕೆ ವಿವಾದವನ್ನು ಸೃಷ್ಟಿಮಾಡಿದ್ದು, ವೇದಿಕೆ ಮೇಲಿದ್ದ ಹಿಂದೂ ಧಾರ್ಮಿಕ ಮುಖಂಡ ಅಚಾರ್ಯ ಲೋಕೇಶ್‌ ವೇದಿಕೆಯಿಂದ ಹೊರಬಂದು, ಹೇಳಿಕೆಯ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಮಾತನಾಡುವ ಸಮಯದಲ್ಲಿ ಬ್ರಹ್ಮ, ಶಿವ, ಶ್ರೀರಾಮ ಯಾರು ಇಲ್ಲದೆ ಇದ್ದಾಗ ಯಾರನ್ನು ಪೂಜೆ ಮಾಡುತ್ತಿದ್ದರೆಂದು ಪ್ರಶ್ನೆಯೊಂದನ್ನು ಮಾಡಿದ್ದೆ ಆಗ  ಓಂ ನ್ನು ಎಂದು ಹೇಳಿದ್ದರು, ಇದನ್ನೆ ನಾವು ಅಲ್ಲಾ ಎನ್ನುತ್ತೇವೆ. ದೇವರನ್ನು ಇಂಗ್ಲೀಷಿನಲ್ಲಿ ಗಾಡ್‌ ಎಂದು ಕರೆದರೆ, ಪಾರ್ಸಿ ಭಾಷಿಕರು ಇದನ್ನು ಖುದಾ ಎನ್ನುತ್ತಾರೆ ಎಂದು ಹೇಳಿದ್ದಾರೆ.

ಅವರ ಹೇಳಿಕೆಗಳನ್ನು ಸಭೆಯಲ್ಲಿ ಕೇಳುತ್ತಿದ್ದ ಅಚಾರ್ಯ ಲೋಕೇಶ್‌ ಮುನಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು ನಾವೆಲ್ಲಾ ಸೌಹಾರ್ದತೆಯಿಂದ ಬಾಳಿಬದುಕುವುದನ್ನುನಾವು ಒಪ್ಪುತ್ತೇವೆ. ಆದರೆ ಓಂ, ಅಲ್ಲಾ ಒಂದೇ ಎಂಬ ಅವರ ಹೇಳಿಕೆಯನ್ನು ಒಪ್ಪಲು ಅಸಾಧ್ಯವೆಂದು ಹೇಳಿದ್ದಾರೆ.

Leave a Reply

Your email address will not be published. Required fields are marked *