ಬೆಂಗಳೂರು: ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯವನ್ನು ಸ್ವಚ್ಚಗೊಳಿಸುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲವೆಂಬುದು ನಿಜವೆಂದು ನಟ ಚೇತನ್ ಅಹಿಂಸಾ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಶಾಲೆಯಲ್ಲಿ ಶೌಚಾಲಯವನ್ನು ಕ್ಲೀನ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ಸಂಸದ ಗೋವಿಂದ ಕಾರಜೋಳ ಹೇಳಿರುವ ಮಾತು ಅಕ್ಷರಶಃ ನಿಜ.ಶೌಚಾಲಯ ಸ್ವಚ್ಚತೆಯಂತಹ ಜಾತಿ ಆಧಾರಿತ ಉದ್ಯೋಗಗಳು ವೃತ್ತಿ ಆಧಾರಿತ ತಾರತಮ್ಯ ಮತ್ತು ಶ್ರೇಣಿ ವ್ಯವಸ್ಥೆಯ ಕಳಂಕವನ್ನು ಹೊಂದಿರುವ ಸಮಾಜ ನಮ್ಮದು.
ಯಾವುದೇ ಉದ್ಯೋಗವು ಕೀಳುಮಟ್ಟದ್ದಲ್ಲ, ಅಥವಾ ಮೇಲ್ಮಟ್ಟದ್ದಲ್ಲ ಎಂಬುದನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಲಿಸಬೇಕು ಎಂದು ನಟ ಚೇತನ್ ಅಹಿಂಸಾ ಬರೆದಿದ್ದಾರೆ.