ಬೆಂಗಳೂರು: ಸಿಎಂ ಕುರ್ಚಿ ಖಾಲಿಯಿಲ್ಲ ಆದರೆ ಕೇಳುವುದರಲ್ಲಿ ತಪ್ಪಿಲ್ಲ” ಎಂದು ಡಿಕೆ ಸುರೇಶ್‌ ಹೇಳಿಕೆಯನ್ನು ನೀಡುವುದರ ಮೂಲಕ ಪಕ್ಷದ ಒಗ್ಗಟ್ಟನ್ನು ವಿರೋದಿಗಳಿಗೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಮುಡಾ ಹಗರಣದ ಕುರಿತು ಚರ್ಚೆ ನಡೆಯುತ್ತಿದ್ದರೆ ಮತ್ತೊಂದೆಡೆ ಸಿಎಂ ಕುರ್ಚಿಯ ಸದ್ದು.  ಹೀಗೆ ಕಾಂಗ್ರೆಸ್ಸಿನವರು ಸಿಎಂ ಕುರ್ಚಿಯ ವಿಚಾರವಾಗಿ ದಿನಕ್ಕೊಂದು ಕ್ಷಣಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ಅದರಲ್ಲಿ ಮಾಜಿ ಸಂಸದ ಡಿಕೆ ಸುರೇಶ್‌ ಕೂಡಾ ಹೇಳಿಕೆಯನ್ನ ನೀಡಿದ್ದಾರೆ.

ಬಿಜೆಪಿ-ಜೆಡಿಎಸ್‌ನವರು ಪಕ್ಷವನ್ನು ಉಳಿಸಿಕೊಳ್ಳಲು ಸಲಹೆಗಳನ್ನು ನೀಡ್ತಾರೆ. ಅವರಿಗ್ಹೇನು ಗೊತ್ತು ನಮ್ಮ ಪಕ್ಷ ಬಲಿಷ್ಟವಾದದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ನಮ್ಮ ಸರ್ಕಾರದಲ್ಲಿ ಸಮರ್ಥನ ನಾಯಕರಿದ್ದಾರೆ. ನಮ್ಮ ಪಕ್ಷದ ಬಗ್ಗೆ ಯಾರೇನೇ ಹೇಳಿದರೂ , ಎಷ್ಟೇ ಕೆಡುಕು ಮಾಡಲು ಪ್ರಯತ್ನಿಸಿದರೂ ನಾವು ಜಗ್ಗದೆ ನಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸುತ್ತೇವೆ ಮತ್ತು ಇನ್ನೂ 5 ವರ್ಷ ಸಿಎಂ ಸಿದ್ದರಾಮಯ್ಯನವರೇ ಆಗಿರ್ತಾರೆ ಎಂದು ಹೇಳಿದ್ದಾರೆ.

ಮುಡಾ ವಿಚಾರ ಸೇರಿದಂತೆ ಹಲವಾರು ನಾಯಕರ ತಲೆಯ ಮೇಲೆ ಗೂಬೆ ಕೂರಿಸಲು ತಂತ್ರಗಳನ್ನು ಹೆಣೆದರೂ ವ್ಯರ್ಥಪ್ರಯತ್ನವೆಂದಿದ್ದಾರೆ.

Leave a Reply

Your email address will not be published. Required fields are marked *