ಫೆಬ್ರವರಿ 14 ರಂದು ಪ್ರೇಮಿಗಳ ದಿನವಾದ್ದರಿಂದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿವೊಂದಾದ ನಂದಿ ಹಿಲ್ಸ್‌ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ಬಂಧವನ್ನು ಹೇರಿದ್ದಾರೆ. ಆದ್ದರಿಂದ ಪ್ರೇಮಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಪ್ರೇಮಿಗಳು ಆತ್ಮಹತ್ಯೆಯಂತಹ ಅನಾಹುತಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯ ಕಾರಣ ನೀಡಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿದೆ.

ಸಮಯ ಮತ್ತು ವ್ಯಾಪ್ತಿ: ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯಾವುದೇ ಪ್ರವಾಸಿಗರಿಗೆ ಅಥವಾ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರೇಮಿಗಳ ದಿನದಂದು ಇಂತಹ ನಿರ್ಬಂಧ ಹೇರಲಾಗಿದೆ.

ಸಾರ್ವಜನಿಕ ಆಕ್ರೋಶ: ಜಿಲ್ಲಾಡಳಿತದ ಈ ಕ್ರಮಕ್ಕೆ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸುರಕ್ಷತೆ ನೀಡುವ ಬದಲು ಪ್ರವೇಶವನ್ನೇ ತಡೆಹಿಡಿಯುವುದು ಸರಿಯಲ್ಲ ಎಂಬುದು ಪ್ರವಾಸಿಗರ ವಾದವಾಗಿದೆ.

Leave a Reply

Your email address will not be published. Required fields are marked *