ಬೆಂಗಳೂರು: ಮತಗಳ್ಳತನದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿಯವರದ್ದು, ಚೈಲ್ಡಿಶ್ ಹೇಳಿಕೆ ಎಂದು ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಹುಲ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿಯಿಂದ ಮತ್ತೆ ಮತ್ತೆ ಮತಗಳ್ಳತನದ ಮಾತುಗಳು ಕೇಳಿಬರುತ್ತೀವೆ. ರಾಹುಲ್ ಗಾಂಧಿಯ ವೋಟ್ ಚೋರಿ ಬಗ್ಗೆ ಸುದ್ದಿಗೋಷ್ಟಿಯನ್ನು ನಡೆಸಿರುವುದಕ್ಕೆ ಪ್ರತಿಕ್ರಿಯಿಸಿದ ನಿಕಿಲ್, ರಾಹುಲ್ ಗಾಂಧಿಯವರದ್ದು, ಚೈಲ್ಡಿಶ್ ಹೇಳಿಕೆ. ಅವರು, ಕರ್ನಾಟಕದಲ್ಲಿ ಕೇವಲ ಒಂದು ಕ್ಷೇತ್ರವನ್ನು ಪಾಯಿಂಟ್ ಔಟ್ ಮಾಡಿ ಮತಗಳ್ಳತನವಾಗಿದೆ ಎಂದು ಆರೋಪವನ್ನ ಮಾಡಿದ್ದಾರೆ. ಬಿ.ಆರ್ ಪಾಟೀಲ್ ಆಯ್ಕೆ ಮಾಡಿರುವ ಆಳಂದ ಕ್ಷೇತ್ರದ ಬಗ್ಗೆಯೂ ಮಾತನಾಡಿರುವ ಅವರು, ಮತಗಳ್ಳತನವಾಗಿ ನಮ್ಮವರು ಸೋತಿದ್ದಾರೆ. ಬೇರೆ ಯಾರೋ ಗೆದ್ದಿದ್ದಾರೆ ಎಂದು ಪಾಯಿಂಟ್ ಮಾಡಿ ಹೇಳುತ್ತಿಲ್ಲ.ರಾಹುಲ್ ಗಾಂಧಿ ಏನು ಮಾಡುತ್ತಿದ್ದಾರೆ ಎಂದು ಅವರ ನಡೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಬಿಹಾರ ಎಲೆಕ್ಷನ್‌ನಲ್ಲಿ ರಾಹುಲ್ ಗಾಂಧಿ ಆರ್‌ಜೆಡಿ ಪಕ್ಷದ ಜೊತೆ ಸಮ್ಮೀಶ್ರವಾಗಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ಸೀಲಿಸೊಕೆ ರಾಹುಲ್‌ಗಾಂಧಿಯೊಬ್ಬರೇ ಸಾಕು. ಅವರ ಮಾತುಗಳು ಬಾಲಿಶವಾದ ಹೇಳಿಕೆಗಳು ಎಂದಿದ್ದಾರೆ.
