ಬೆಳಗಾವಿ: ನಾನು ಸತ್ತರೂ ಬಿಜೆಪಿ ಆರ್. ಎಸ್.ಎಸ್. ಕಡೆ ವಾಲುವುದಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಕೆ ಹರಿಪ್ರಸಾದ್ ಕಾಲು ಎಳೆಯಲು ಬಿಜೆಪಿ ಮತ್ತು ಆರ್. ಎಸ್.ಎಸ್ ವಿಚಾರ ಪ್ರಸ್ಥಾಪಿಸುತ್ತಾರೆ ಶಾಂತಾರಾಮ್ ಸಿದ್ದಿಯವರು. ಹರಿಯನ್ನು ವಿರೋದ ಮಾಡಿದ ಹಿರಣ್ಯ ಕಶ್ಯಪಿಗೆ ಕೊನೆಗೆ ಹರಿಯ ದರ್ಶನವಾಯ್ತು, ಹಾಗೆಯೇ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರೋದಿಸಿದ ಬಿಕೆ ಹರಿಪ್ರಸಾದ್‌ಗೆ ಕೊನೆಗೆ ಬಿಜೆಪಿ ಮತ್ತು ಆರ್. ಎಸ್.ಎಸ್ ದರ್ಶನವಾಗುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಶಾಂತರಾಮ ಸಿದ್ದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಕೆ ಹರಿಪ್ರಸಾದ್ ನಾನು ಸತ್ತರೂ ನನ್ನ ಡೆಡ್ ಬಾಡಿ ಕೂಡಾ ಬಿಜೆಪಿ ಮತ್ತು ಆರ್. ಎಸ್.ಎಸ್ಕಡೆ ಸುಳಿಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇವರಿಬ್ಬರ ವಾದ-ವಿವಾದವನ್ನು ಕೇಳಿಸಿಕೊಂಡ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, “ನಿಮ್ಮ ಡೆಡ್ ಬಾಡಿಯನ್ನು ಬಿಜೆಪಿ ಆಫೀಸಿನವರೆಗೂ ಬಿಟ್ಟುಕೊಳ್ಳುವುದಿಲ್ಲವೆಂದು ಟಾಂಗ್ ನೀಡಿದ್ದಾರೆ.
