ಮೈಸೂರು: ಮುಡಾ ಆಫೀಸಿನಲ್ಲಿ ಇಡಿ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂದವನ್ನು ಹೇರಲಾಗಿದೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಮುಡಾ ಆಫೀಸಿನಲ್ಲಿ ನೆನ್ನೆ ಪ್ರಾರಂಬಿಸಿದ ಇಡಿ ಅಧಿಕಾರಿಗಳು ಎರಡನೇ ದಿನವಾದ ಇಂದೂ ಕೂಡಾ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ನೆನ್ನೆ ಅಂದರೆ ಶುಕ್ರವಾರ 10ಗಂಟೆಯವರೆಗೂ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಇಂದು ಬೆಳಗ್ಗೆಯೂ ಕೂಡಾ ಪರಿಶೀಲನೆಯನ್ನು ಮುಂದುವರೆಸುತ್ತಿದ್ದು ಸಾರ್ವಜನಿಕರಿಗೆ ಪ್ರವೇಶಕ್ಕೆ ನಿರ್ಬಂಧವನ್ನು ಹೇರಿದ್ದಾರೆ.
ಮುಡಾ ಕಚೇರಿಯಲ್ಲಿನ ಅಧಿಕಾರಿಗಳು ಸಿಬ್ಬಂದಿಗಳು ಸಹಕರಿಸಿರುವುದರ ಕಾರಣ ದಿನದ ಚಟುವಟಿಕಗಳು ಸ್ಥಿರವಾಗಿವೆ. ಸಾರ್ವಜನಿಕರ ಪ್ರವೇಶವನ್ನು ರದ್ದು ಮಾಡಲಾಗಿದೆ.