ಮೈಸೂರು: ಒಡವೆಯನ್ನು ಕದ್ದ ಕಳ್ಳ ಮತ್ತೆ ಒಡವೆಗಳನ್ನು ವಾಪಸ್ ಕೊಟ್ಟರೆ ಕೇಸ್ ಕ್ಲೋಸ್ ಆಗುತ್ತಾ? ಆಗಲ್ಲ? ಹಾಗೆಯೇ ಸಿಎಂ ಸಿದ್ದರಾಮಯ್ಯನವರ ಪತ್ನಿ ಸೈಟ್ ವಾಪಸ್ ನೀಡಿದರೂ ಕಾನೂನು ಕ್ರಮ ಎದುರಿಸಬೇಕೆಂದು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮಾಡಾ ಸೈಟು ವಾಪಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರತಾಪ್ ಸಿಂಹ, ‘ ಮುಡಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡು ವಾಪಸ್ ನೀಡಲು ನಿರ್ಧರಿಸಿದ್ದಾರೆ. ತಪ್ಪು ಮಾಡಿಲ್ಲ ಎಂದರೆ ಯಾಕೆ ವಾಪಸ್ ನೀಡಿದ್ರು? ಸೈಟುಗಳನ್ನು ಇಟ್ಟುಕೊಂಡು ತನಿಖೆಗಳನ್ನು ಎದುರಿಸಬಹುದಿತ್ತಲ್ಲ. ಪ್ರಕರಣ ದಾಖಲಾದ ಕೂಡಲೇ ನೀಡಿದ್ದರೆ ಸಿಎಂ ಕುರ್ಚಿ ಉಳಿಯುತ್ತಿತ್ತು ಆದರೀಗ ನೀಡಿದರೆ ಏನು ಪ್ರಯೋಜನ? ರಾಜೀನಾಮೆ ನೀಡಲೇ ಬೇಕಾಗುತ್ತದೆ ಎಂದಿದ್ದಾರೆ.
ಈ ಪ್ರಕರಣದ ಮೂಲಕ ಕುಟುಂಬ ರಾಜಕಾರಣ ಮಾಡುವವರೆಲ್ಲರಿಗೂ ಇದೊಂದು ದೊಡ್ಡ ಪಾಠವಾಗಿದೆ.ಇನ್ನಾದರೂ ಇಮ್ಮ ಸ್ಥಾನದ ನೈತಿಕ ಹೊಣೆಯನ್ನು ಹೊತ್ತು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಅಕ್ರಮ ಅನಾಚಾರಗಳನ್ನು ಮಾಡಿ ಸಿಕ್ಕಿಬಿದ್ದಾಗ ದುಃಖ ಪಡುವುದರಲ್ಲಿ ಯಾವ ಪ್ರಯೋಜನವಿಲ್ಲವೆಂದಿದ್ದಾರೆ.