RCB ಎಂದರೆ ಕ್ರಿಕೆಟ್ ಫ್ಯಾನ್ಸ್‌ಗಳಲ್ಲಿ ಉತ್ಸಾಹ ತುಂಬುತ್ತದೆ. ತಂಡ ಹುಡುಗಿಯರದ್ದು, ಹುಡುಗರದ್ದು, ಎಂಬುದು ಮ್ಯಾಟರ್ ಆಗುವುದಿಲ್ಲ, ಬದಲಾಗಿ ನಮ್ಮ ಬೆಂಗಳೂರು ಟೀಂ ಎಂದು ಜನ ಹುಚ್ಚೆದ್ದು, ಕುಣಿಯುತ್ತಾರೆ.

ಮಹಿಳಾ ಪ್ರೀಮಿಯರ್ ಲೀಗ್ ಶುರುವಾಗುವುದಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದ್ದು, ಆಟಕ್ಕೂ ಮುನ್ನವೇ ಮೋಡಿ ಮಾಡುತ್ತಿವೆ. ಸಾಮಾಜಿಕ ಜಾಲಾತಾಣದಲ್ಲಿ RCB ಆಟಗಾರರ ಪೋಟೋ ಶೂಟ್ ಕೆಲವು ಫೋಟೋಗಳು, ಒಂದು ಸಣ್ಣ ವಿಡಿಯೋ ಕೂಡಾ ವೈರಲ್ ಆಗಿ ಫ್ಯಾನ್ಸ್ ಫುಲ್ ಕುಷ್ ಆಗಿದ್ದಾರೆ ಎನ್ನಲಾಗಿದೆ.

ಬೆಲ್ರವರ ವೇಗಕ್ಕೆ ಎದುರಾಳಿ ಬ್ಯಾಟರ್‌ಗಳು ತತ್ತರಿಸುವುದು ಗ್ಯಾರಂಟಿ.ಈ ಬಾರಿ ಸ್ಮೃತಿ ಮಂಧಾನ ನಾಯಕತ್ವದ RCB ತಂಡಕ್ಕೆ ಲಾರೆನ್ ಸೇರ್ಪಡೆಯಾಗಿರುವುದು ಬೌಲಿಂಗ್ ವಿಭಾಗಕ್ಕೆ ಹೊಸ ಕಳೆ ತಂದಿದ್ದು,ಸದ್ಯ ಇವರ ಸ್ಟೈಲಿಶ್ ಫೋಟೋಗಳು ಮತ್ತು ಪ್ರಾಕ್ಟೀಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.ಲಾರೆನ್ ಬೆಲ್ ಅವರ ಎಂಟ್ರಿಯಿಂದ RCB ಈ ಬಾರಿ ಕಪ್ ಗೆಲ್ಲುತ್ತಾಎನ್ನುವುದನ್ನು ಕಾದು ನೋಡಬೇಕಿದೆ.
