ಬೆಂಗಳೂರು:ಮಾರ್ಟಿನ್ ಸಿನಿಮಾದ ನಿರ್ಮಾಪಕರ ವಿರುದ್ದ ಅದೇ ಸಿನಿಮಾದ ನಿರ್ದೇಶಕರಾದ ಎಪಿ ಅರ್ಜುನ್ರವರು ಮಾರ್ಟಿನ್ ಚಿತ್ರವನ್ನು ಬಿಡುಗಡೆಗೊಳಿಸದಂತೆ ನಿರ್ಬಂಧವನ್ನು ಕೋರಿ ಹೈಕೋರ್ಟಿಗೆ ಅರ್ಜಿಯನ್ನ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ನಾನು ಸಿನಿಮಾದ ನಿರ್ದೇಶಕನಾದರೂ ಕೂಡಾ ನನ್ನ ಹೆಸರನ್ನು ಪ್ರಸ್ಥಾಪಿಸದೆ ಸಿನಿಮಾದ ಪ್ರಮೋಷನ್ ಮಾಡಿದ್ದಾರೆ. ನಾವು ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಹಾಗೆ ಅವರು ನಡೆದುಕೊಳ್ಳುತ್ತಿಲ್ಲ. ಹಾಗಾಗಿ ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.