ದುಬೈ: ಮಾಲಿವುಡ್ ನಟ ನಿವಿಲ್ ಪೌಲ್ ಮತ್ತು ಇತರ ಐವರು ದುಬೈನಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಸದ್ಯ ನಟ ನಿವಿಲ್ ಪೌಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ಈ ಪ್ರಕರಣದಲ್ಲಿರುವ ಆರೋಪಿಗಳು ಮೂರು ದಿನ ನೀರು,ಊಟ, ಕೊಡದೆ ಕೂಡಿಹಾಕಿ ಮಾದಕ ಧ್ರವ್ಯವನ್ನು ನೀಡಿ ಅತ್ಯಾಚಾರ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನಟ ನಿವಿಲ್ ಪೌಲ್ “ನಾನು ಆ ಮಹಿಳೆಯನ್ನು ನೋಡಿಲ್ಲ, ಮತ್ತು ಎಂದಿಗೂ ಭೇಟಿಯಾಗಿಲ್ಲ ಇದೆಲ್ಲ ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿ”ಯೆಂದು ತನ್ನ ಮೇಲಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.