ಹಾಸನ : ಚುನಾವಣೆಯ ಪ್ರಚಾರ ಭರದಿಂದ ಸಾಗುತ್ತಿದ್ದು ಇದೇ ವೇಳೆ ಶಾಸಕ ಶಿವಲಿಂಗೇಗೌಡರಿಗೆ ಕಳೆದ 3 ವರ್ಷಗಳಿಂದ ಜೆಡಿಎಸ್ ಚಿಹ್ನೆ ಅಂದ್ರೆ ಅವರಿಗೆ ಅಲರ್ಜಿ ಆಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಶಿವಲಿಂಗೇಗೌಡರು ಜೆಡಿಎಸ್ ಪಕ್ಷದಿಂದ ದೂರವಿದ್ದು ಕಳೆದೆರಡು ವರ್ಷಗಳಿಂದ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಾಗಲೀ ಅಥವಾ ಚಟುವಟಿಕೆಯಲ್ಲಾಗಲೀ ಭಾಗಿಯಾಗಿರಲಿಲ್ಲವೆಂದಿದ್ದಾರೆ. ಕಳೆದೆರಡು ವರ್ಷಗಳ ಮೊದಲೇ ಜೆಡಿಎಸ್ ತೊರೆಯುವ ಬಗ್ಗೆ ತೀರ್ಮಾನವನ್ನ ತೆಗೆದುಕೊಂಡಿದ್ದರು, ಅರಸೀಕೆರೆಯಲ್ಲಿಂದು ಪಕ್ಷದ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇವೆಂದಿದ್ದು ಈ ವೇಳೆಯಲ್ಲೇ ಅರಸೀಕೆರೆಯ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಘೋಷಣೆಯಾಗುವ ಸಾಧ್ಯತೆಯೂ ಇದೆ ಎಂದಿದ್ದಾರೆ.