ನಮ್ಮ ದೇಶದಲ್ಲಿ ದೈರ್ಯವಾಗಿ ಮಾತನಾಡುವವರನ್ನು ಮಾತನಾಡಲು ಬಿಡುವುದಿಲ್ಲೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಜಾರ್ಖಂಡ್‌ ರಾಜ್ಯದ ಸಾಹೇಬ್‌ಗಂಜ್‌ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ‘ಹಾತ್ ಸೇ ಹಾತ್ ಜೋಡೊ‘ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ನಿನ್ನೆ ನಡೆದ ಸಂಸತ್ತಿನಲ್ಲಿ ನಾನು ಹೇಳಿದ ಕೆಲವು  ಭಾಷಣದ ತುಣುಕುಗಳನ್ನು ನಾಶಪಡಿಸಿದ್ದು ನಮಗೆ ಸಂಸತ್ತಿನ ಒಳಗಡಯಾಗಲೀ,  ಅಥವಾ ಹೊರಗಡೆಯಾಗಲೀ ಮಾತನಾಡುವ  ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಧೈರ್ಯವಾಗಿ ಮಾತನಾಡುವವರನ್ನು, ಭಾಷಣ ಮಾಡುವವರನ್ನು ಜೈಲಿಗೆ ಕಳಿಲಾಗುತ್ತಿದೆಂದು ಬಿಜೆಪಿ ಪಕ್ಷದವರ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. 2014ರಲ್ಲಿ ದೇಶದಲ್ಲಿರುವ ಹಣದ ಸಮಸ್ಯೆಯನ್ನು ಹೋಗಲಾಡಿಸಿ ಭ್ರಷ್ಟಚಾರ ಮುಕ್ತ ದೇಶವನ್ನಾಗಿ ಮಾಡುತ್ತೇನೆ ಎನ್ನುವ ಭರವಸೆಯೊಂದಿಗೆ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಿತ್ತಾದರೂ ಅವರು ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಜನರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ದೇಸದಲ್ಲಿ ಬಡತನ ಹೆಚ್ಚಿದ್ದು ಕನಿಷ್ಟ ಮೂಲಸೌಕರ್ಯಗಳ ವಂಚಿತರಾಗಿದ್ದಾರೆ ಎಂದು ಬಿಜೆಪಿಯ ವಿರುದ್ದ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *