ಕಲ್ಕತ್ತಾದಲ್ಲಿ ನವೆಂಬರ್ 2024 ರಿಂದ ಡಿಸೆಂಬರ್ 2025 ರವರೆಗೆ ನಡೆಯುವ ಉತ್ಸವಗಳು. ಆಗಸ್ಟ್ 3, 2025 ರಂದು ರಾಮಕೃಷ್ಣ ಮಿಷನ್ ಸ್ವಾಮಿ ವಿವೇಕಾನಂದರ ಪೂರ್ವಜರ ಮನೆ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿರುವ ಈ ಉತ್ಸವವು 19 ನೇ ಶತಮಾನದ ಸಾಹಿತ್ಯ ಪ್ರವರ್ತಕರು ಮತ್ತು ಸ್ವಾತಂತ್ರ್ಯ ಚಳವಳಿಯ ಪ್ರತಿಮೆಗಳನ್ನು ಗೌರವಿಸುತ್ತದೆ.

ಜೆಎಸ್‌ಪಿ ಟ್ರಸ್ಟ್ ಕಾಜಿ ನಜ್ರುಲ್ ಸ್ಮಾರಕ ಪ್ರೇಮಾಂಜಲಿ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ. ಈ ಪ್ರಶಸ್ತಿ ಪುರಸ್ಕಾರವನ್ನು ಕರ್ನಾಟಕ ಮೂಲದ ಕವಿ, ಶ್ರೀ ನಾಗತಿಹಳ್ಳಿ ರಮೇಶ್ ( ಕವಿಗಳು, ಬಹುಮುಖಿ ಚಿಂತಕರು,ಸಂಘಟಕರು, ಚಿತ್ರ ನಿರ್ದೇಶಕರು , ರಾಜಕೀಯ-ಸಾಮಾಜಿಕ ಕಾರ್ಯಕರ್ತರು ಹಾಗೂ ಕೃಷಿಕರು) ರವರನ್ನು ಇವರ ಬದುಕು, ಬರಹ, ನಡೆ ನುಡಿ ಹಾಗೂ ಭಾರತೀಯ ಸಾಹಿತ್ಯಕ್ಕೆ ನೀಡಿದ ಕೊಡುಗೆ ಸೇರಿದಂತೆ ಇವರ ಸಮಗ್ರ ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿದೆ. . ಪ್ರಶಸ್ತಿಯು ಒಂದು ಲಕ್ಷ, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಭಾರತ ಮತ್ತು ವಿದೇಶಗಳಿಂದ ಪ್ರಮುಖ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಉದ್ಘಾಟನೆ:
ಕವಿ ಶೋಭಾಂದೇಬ್ ಚಟ್ಟೋಪಾಧ್ಯಾಯ, ಗೌರವಾನ್ವಿತ ಸಂಸದೀಯ ವ್ಯವಹಾರಗಳು ಮತ್ತು ಕೃಷಿ ಸಚಿವರು, ಪಶ್ಚಿಮ ಬಂಗಾಳ ಸರ್ಕಾರ.

ಮುಖ್ಯ ಅತಿಥಿ:
ಸ್ವಾಮಿ ಮಹಾಪ್ರಜ್ಞಾನಂದಾಜಿ, ಪ್ರಾಚಾರ್ಯರು, ರಾಮಕೃಷ್ಣ ಮಿಷನ್ ವಿದ್ಯಾಮಂದಿರ, ಬೇಲೂರು ಮಠ.

ಗೌರವಾನ್ವಿತ ವಿಶೇಷ ಅತಿಥಿ:
ಶ್ರೀ. ನ್ಯಾಯಮೂರ್ತಿ ಶ್ಯಾಮಲ್ ಕುಮಾರ್ ಸೇನ್ (ನಿವೃತ್ತ), ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರು ಮತ್ತು ಕಲ್ಕತ್ತಾ ಮತ್ತು ಅಲ್ಲಾಹದಬ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶರು.

ಅಧ್ಯಕ್ಷರು:
ಡಾ.ಧೃಬಜ್ಯೋತಿ ಚಟ್ಟೋಪಾಧ್ಯಾಯ, ಗೌರವಾನ್ವಿತ ಉಪಕುಲಪತಿ ಸಿಸ್ಟರ್ ನಿವೇದಿತಾ ವಿಶ್ವವಿದ್ಯಾಲಯ.

ಗೌರವಾನ್ವಿತ ಅತಿಥಿಗಳು :
ಶ್ರೀ ನಾಗತಿಹಳ್ಳಿ ರಮೇಶ್,
ಅಂತಾರಾಷ್ಟ್ರೀಯ ಖ್ಯಾತಿಯ ಕವಿ, ಕಿರುಚಿತ್ರ ನಿರ್ಮಾಪಕ, ಗೀತರಚನೆಕಾರ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ, ಸಮಾಜ ಸೇವಕ, ಕೃಷಿಕ ಮತ್ತು ಮಾನವತಾವಾದಿ. (ಕರ್ನಾಟಕ)

ಶ್ರೀ ಪೃಥ್ವಿ
ಮಾಜಿ, ಗೌರವಾನ್ವಿತ ಮಾಜಿ ಸ್ಪೀಕರ್ ಎಲ್.ಎ, ಮತ್ತು ಮಾಜಿ ಸಚಿವ ಗೋ. ಅಸ್ಸಾಂ ನ

ಪದ್ಮಶ್ರೀ ಡಾ. ಸೂರ್ಜ್ಯಾ ಹಜಾರಿಕಾ,
ಖ್ಯಾತ ಲೇಖಕಿ ಮತ್ತು ಪ್ರಕಾಶಕರು; ಮಾಜಿ ಅಧ್ಯಕ್ಷ ಅಸ್ಸಾಂ ಸಾಹಿತ್ಯ ಸಭೆ

ಶ್ರೀ ಅವಿಶೇಕ್ ರಥ್,
ಖ್ಯಾತ ಬರಹಗಾರ, ಅನುವಾದಕ, ಕಾರ್ಯನಿರ್ವಾಹಕ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ

ಶ್ರೀ ದೇಬಾಶಿಸ್ ಬೋಸು,
ಎಮಿನೆಂಟ್ ರೆಸಿಟರ್ (ಏರ್ & ಡಿ.ಡಿ. ಕೋಲ್ಕತ್ತಾ)

ಶ್ರೀ ದೀಪಕ್ ಪಾಂಡ,
ಖ್ಯಾತ ಬರಹಗಾರ, ಸಂಶೋಧಕ ಮತ್ತು ಪತ್ರಕರ್ತ (ಸಂಬಲ್ಪುರ, ಒರಿಸ್ಸಾ)

ರಾಜೇಂದ್ರ ಗುರೈನ್,
ಖ್ಯಾತ ಕವಿ ಉಪಾಧ್ಯಕ್ಷರು. ರೈಟರ್ಸ್ ಇಂಟರ್ನ್ಯಾಷನಲ್ ಕೊಲೊರಾಡೋ USA (ನೇಪಾಳ)

ಜಹಾಂಗೀರ್ ಹಬೀಬುಲ್ಲಾ,
ಖ್ಯಾತ ಕವಿ, ಸಂಪಾದಕ ಮತ್ತು ಪ್ರಕಾಶಕರು ದೈನಿಕ್ ದೇಶ್ ಸೆಬಾ (ಬಿಡಿ)

ಪ್ರೊ. ಎಂ.ಡಿ. ಅಲಿ ಖಾನ್ ಚೌಧರಿ ಮಾಣಿಕ್,
ಖ್ಯಾತ ಕವಿ ಮತ್ತು ಬರಹಗಾರ, (ಢಾಕಾ, ಬಾಂಗ್ಲಾದೇಶ)

ಶ್ರೀ ಮೃಣಾಲ್ ಕಾಂತಿ ಪಂಡಿತ್,
ಪ್ರಖ್ಯಾತ ಕವಿ ಮತ್ತು ಬರಹಗಾರ, (ಅಗರ್ತಲಾ, ತ್ರಿಪುರ)

ವೈಭವಯುತ ಉಪಸ್ಥಿತಿ:
ಡಾ. ಕೆಂಪಾ ಹೊನ್ನಯ್ಯ
ಐಎಎಸ್, ಖ್ಯಾತ ಬರಹಗಾರ ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಪಶ್ಚಿಮ ಮೇದಿನಿಪುರ

ಡಾ. ಚಂದ್ರಶೇಖರ್ ಹೋಟಾ
ಐಪಿಎಸ್, ಖ್ಯಾತ ಬರಹಗಾರರು ಮತ್ತು ಕಾರ್ಯದರ್ಶಿ ಒರಿಸ್ಸಾ ಸಾಹಿತ್ಯ ಅಕಾಡೆಮಿ, ಒರಿಸ್ಸಾ ಸರ್ಕಾರ.

ಬಿಯರ್ ಮುಕ್ತಿಜೋದ್ಧ ಎಕೆಎಂ ಸಿರಾಜುಲ್ ಇಸ್ಲಾಂ
ಖ್ಯಾತ ಕವಿ, ಅಧ್ಯಕ್ಷರು, ಬಾಂಗ್ಲಾದೇಶ ಭಾರತ ಮುಕ್ತಿಯುದ್ಧೋ’71 ಸಂಸ್ಕೃತ ಮೈತ್ರಿ ಫ್ರಂಟ್. (ಢಾಕಾ, ಬಾಂಗ್ಲಾದೇಶ)

ಡಾ. ಎಂಡಿ. ಕಮ್ರುಲ್ ಹಸನ್,
ಅಸೋಸಿಯೇಟ್ ಪ್ರೊಫೆಸರ್. (ಇಂಗ್ಲಿಷ್) ಬಿಜಿಎಂಇಎ ಫ್ಯಾಷನ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಬಿಡಿ)

ಬಿಯರ್ ಮುಕ್ತಿಜೋದ್ಧ ಮನ್ನಾ ರೇಹಾನ್,
ಪ್ರಸಿದ್ಧ ಕವಿ, ಮತ್ತು ಪತ್ರಕರ್ತ (ಕುಸ್ತಿಯಾ, ಬಾಂಗ್ಲಾದೇಶ)

ಎಂಡಿ. ಶಂಸುಲ್ ಹುಕ್ ಬಾಬು,
ಪ್ರಖ್ಯಾತ ಸಂಶೋಧಕರು, ಅಧ್ಯಕ್ಷರು. ವರ್ಲ್ಡ್ ವೈಡ್ ರೈಟರ್ಸ್ ಅಸೋಸಿಯೇಷನ್ (ಬಿಡಿ)

ಪಿತಾಂಬರ್ ಬಾರಿಕ್,
ಖ್ಯಾತ ಬರಹಗಾರ ಮತ್ತು ಉಪ ಪ್ರೆಸಿ. ಉತ್ಕಲ್ ಶಿಕ್ಷಾ ಸಂಸದ್ (ಒರಿಸ್ಸಾ)

ಮುಜಿಬಾರ್ ರೆಹಮಾನ್,
ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ
ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಡತನವೆಂಬ ಚಿನ್ನದ ಕುಲುಮೆ ; ನಾಗತಿಹಳ್ಳಿ ರಮೇಶ್ ರವರಿಂದ ಕಾಜಿ ನಜ್ರುಲ್ ಇಸ್ಲಾಂರವರೆಗೆ….


ಕಾಜಿ ನಜ್ರುಲ್ ಇಸ್ಲಾಂ ಮತ್ತು ನಾಗತಿಹಳ್ಳಿ ರಮೇಶ್
ನೊಂದು ಬೆಂದವರ ಪರ ಈ ಇಬ್ಬರಿಗೂ ಸಮಾನವಾದ ಮಾನವೀಯತೆಯ ಸಾಮಾಜಿಕವಾದ ಕಳಕಳಿ ಇದೆ. ಈ ಇಬ್ಬರೂ ಕವಿಗಳು, ಈ ಇಬ್ಬರೂ ಪತ್ರಕರ್ತರು, ಈ ಇಬ್ಬರೂ ಹೋರಾಟಗಾರರು, ಈ ಇಬ್ಬರೂ ಸಂಗೀತ ಸಾಹಿತ್ಯ ಬರಹಗಾರರು, ಮತ್ತು ಈ ಇಬ್ಬರೂ ಕೃಷಿಕರೂ ಕೂಡ. ಇಂತಹ ಹಿರಿಯ ಹೋರಾಟಗಾರ ಕಾಜಿ ನಜ್ರುಲ್ ಇಸ್ಲಾಂ ರ ಸ್ಮರಣೆಯಲ್ಲಿ ಕೊಡುತ್ತಿರುವ ‘ ಪ್ರೇಮಾಂಜಲಿ ಅಂತರ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ 2025 ನ್ನು ಮೊಟ್ಟ ಮೊದಲ ಬಾರಿಗೆ ಭಾರತದ ದಕ್ಷಿಣ ರಾಜ್ಯ ಕರ್ನಾಟಕದ ನಾಗತಿಹಳ್ಳಿ ರಮೇಶ್ ರವರ ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಮುಂದಿನ ಈ ಪ್ರಶಸ್ತಿ ಪುರಸ್ಕಾರವನ್ನು ಬಾಂಗ್ಲಾ ದೇಶದ ಸಾಧಕರಿಗೆ ನೀಡಲಾಗುತ್ತದೆ.

ಬಾಂಗ್ಲಾ ದೇಶದ ರಾಷ್ಟ್ರೀಯ ಕವಿ ಕಾಜಿ ನಜ್ರುಲ್ ಇಸ್ಲಾಂ ಮತ್ತು ಕರ್ನಾಟಕದ ಪ್ರಸಿದ್ಧ ಕವಿ ನಾಗತಿಹಳ್ಳಿ ರಮೇಶ್ ರವರ ಬದುಕು ಬರಹ ಹೋಲಿಕೆಯಿಟ್ಟು ನೋಡುವಾಗ ಈ ಕೆಳಗಿನ ವಿಚಾರಗಳು ಹೊಳೆದವು ; ‘ಬಡತನವನ್ನು ನಾವು ಯಾವಾಗ ಕತ್ತಲೆ ಎಂದು ತಿಳಿಯುತ್ತೇವೆಯೋ ಆಗ ನಮ್ಮ ಬೆಳಕಿನ ಕನಸುಗಳು ಸಾಯುತ್ತವೆ. ಬಡತನವೆಂಬ ಕತ್ತಲೆಯಲ್ಲಿ ಬೆಳಕನರಸಿ ತಾನೇ ಬೆಳಕಾಗುವ ಕನಸು ಬಲು ಹಿರಿದು. ಈ ಜೀವನದಲ್ಲಿ ನಾವು ಅಂದುಕೊಂಡಿದ್ದು ಒಂದು ನೆರವೇರದೆ ಸಮಾಜ ಕೊಟ್ಟ ಆಕಾರಕ್ಕೆ ನಾವೇ ಬದಲಾಗಿ ಬದುಕುವುದು ಮನುಷ್ಯನ ಸ್ವಾತಂತ್ರ್ಯ ನಾಶವಾದ ಬದುಕಾಗಿದೆ. ನಾವು ಕಂಡ ಕನಸು ಬರೀ ಕನಸಾಗಿ ಒಂದು ಹತಾಶೆಯ ಸ್ವಗತವಾಗಿ ಜೀವನವಿಡಿ ನಮ್ಮನ್ನು ಹಿಂಬಾಲಿಸಿ ವಿಕ್ರಂ ಮತ್ತು ಬೇತಾಳದ ಒಂದು ಕಥೆಯ ಪಾತ್ರ ನಾವೇ ಆಗಿಬಿಡುವುದು ಅಸಹನೀಯವಾದದ್ದು. ನಮ್ಮದಲ್ಲದ ಯಾರದೋ ಬಾಳನ್ನು ಬಾಳುತ್ತಾ ಹೋಗುವುದು ಸತ್ತ ಹೆಣದ ಬಾಳಾಗುವುದು. ಈ ಕಾರಣಕ್ಕಾಗಿಯೇ ಕವಿ ಕಲಾವಿದ ಸಾಹಿತಿಗಳು ನಾಟಕಕಾರರು ಯೋಗಿಗಳು ಜೀವನಕ್ಕೆ ಸೃಜನಶೀಲವಾದ ಕಲೆಯ ಬಾಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರೊಬ್ಬರೂ ಇನ್ನೊಬ್ಬರ ಅಡಿಯಾಳಾಗಿ ಸೃಜನಶೀಲರಾಗಲು ಸಾಧ್ಯವೇ ಇಲ್ಲ ಅಥವಾ ಯಾರು ಅಧಿಕಾರದ ಅಡಿಯಲ್ಲಿ ಬಾಳುತ್ತಿರುವರೋ ಅವರು ಸೃಜನಶೀಲರಾಗಲು ಸಾಧ್ಯವೇ ಇಲ್ಲ. ಕಾರಣ, ಉಸಿರುಗಟ್ಟಿದ ಪಂಜರದಲ್ಲಿ ಯಾವ ಹಕ್ಕಿಯು ಬದುಕಲಾರದು. ಯಾಕೆಂದರೆ ಸೃಜನಶೀಲತೆಯ ಅರ್ಥ ಸ್ವಾತಂತ್ರ್ಯವೇ ಆಗಿದೆ. ಜಗತ್ತಿನೆಲ್ಲ ಕಲೆ ಸಾಹಿತ್ಯ ಇತ್ಯಾದಿ ಸೃಜನಶೀಲ ಕಾರ್ಯಗಳು ಮಾನವನ ಬದುಕಿನ ಉನ್ನತಿಯ ಉದ್ದೇಶಗಳೇ ಆಗಿವೆ. ಆದರೆ ಕಲೆ ಸಾಹಿತ್ಯದಲ್ಲಿ ರಾಜಕೀಯ ಬೇರೆತಾಗಲೆಲ್ಲ ಅಧಿಕಾರದಡಿಯಲ್ಲಿ ಸಿಲುಕಿದ ಬೂಟಾಟಿಕೆ (Hypocrisy)ಯ ಭಾಷೆಯನ್ನೇ ಇದೇ ಕಲೆ ಸಾಹಿತ್ಯ ಎಂದು ಅಟ್ಟಕೇರಿಸುವ, ಇದೇ ಸತ್ಯವೆಂದು ನಂಬಿಸಲು ಪ್ರಯತ್ನಿಸುವ ಪ್ರಯತ್ನಗಳು ನಡೆಯುತ್ತವೆ. ಅದನ್ನು ವಿರೋಧಿಸುವವರನ್ನು ಮಲೇಳಲಾಗದಂತೆ ವ್ಯವಸ್ಥಿತವಾಗಿ ತುಳಿದು ಹಾಕುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಈ ಬೂಟಾಟಿಕೆಯ (Hypocrisy) ಜನ ಬಾಯಲ್ಲಿ ಆದರ್ಶ, ನಡೆಯಲ್ಲಿ ಕುತಂತ್ರತನ ಹೊಂದಿದವರಾಗಿದ್ದು, ಇವರು ಕಲಾವಿದ, ಸಾಹಿತಿಗಳ ವೇಷದಲ್ಲಿರುವ ಮೋಸಗಾರರಾಗಿದ್ದಾರೆ. ಕಾಜಿ ನಜ್ರುಲ್ ಇಸ್ಲಾಂ ಮತ್ತು ನಾಗತಿಹಳ್ಳಿ ರಮೇಶ್ ರವರ ಬದುಕು ತಾವೇ ಆಯ್ಕೆ ಮಾಡಿಕೊಂಡ ಕಲಾವಿದರ ಬದುಕಾಗಿದೆ.

ಕಾಜಿ ನಜ್ರುಲ್ ಇಸ್ಲಾಂ ರ ಬದುಕು ಬಡತನದ ಬದುಕೇ. 10 ವರ್ಷದ ನಜ್ರುಲ್ ಇಸ್ಲಾಂ ತಮ್ಮ ಕುಟುಂಬವನ್ನು ಪೋಷಿಸಲು ಮಸೀದಿಯ ಉಸ್ತುವಾರಿ ವಹಿಸಿಕೊಂಡರು. ಅವರು ಶಾಲೆಯಲ್ಲಿ ಶಿಕ್ಷಕರಿಗೆ ಸಹ ಸಹಾಯ ಮಾಡುತ್ತಿದ್ದರು. ನಂತರ ಅವರು ಮಸೀದಿಯಲ್ಲಿ ಮುಯೆಜ್ಜಿನ್ ಆಗಿ ಕೆಲಸ ಮಾಡಿದರು ನಂತರ, ಜಾನಪದ ರಂಗಭೂಮಿಯತ್ತ ಆಕರ್ಷಿತರಾದ ನಜ್ರುಲ್ ಇಸ್ಲಾಂ, ತಮ್ಮ ಚಿಕ್ಕಪ್ಪ ಫಜಲ್ ಕರೀಮ್ ನಡೆಸುತ್ತಿದ್ದ ಲೆಟೊ ಎಂಬ ಪ್ರವಾಸ ರಂಗಭೂಮಿ ಗುಂಪು ಸೇರಿದರು. ಅವರು ಅವರೊಂದಿಗೆ ಕೆಲಸ ಮಾಡಿದರು ಮತ್ತು ಪ್ರಯಾಣಿಸಿದರು, ನಟನೆಯನ್ನು ಕಲಿತರು, ಜೊತೆಗೆ ನಾಟಕಗಳು ಮತ್ತು ಸಂಗೀತಗಳಿಗೆ ಹಾಡುಗಳು ಮತ್ತು ಕವಿತೆಗಳನ್ನು ಬರೆದರು. ೧೯೧೦ ರಲ್ಲಿ, ನಜ್ರುಲ್ ಇಸ್ಲಾಂ ಆ ತಂಡವನ್ನು ತೊರೆದು ರಾಣಿಗಂಜ್‌ನ ಸಿಯರ್ಸೋಲ್ ರಾಜ್ ಪ್ರೌಢಶಾಲೆಗೆ ಸೇರಿದರು . ಶಾಲೆಯಲ್ಲಿ , ಅವರು ತಮ್ಮ ಶಿಕ್ಷಕ ಜುಗಂತರ್ ಕಾರ್ಯಕರ್ತ ನಿಬರಣ್ ಚಂದ್ರ ಘಟಕ್ ಅವರಿಂದ ಪ್ರಭಾವಿತರಾಗಿ , ಸಹ ಲೇಖಕ ಶೈಲಜಾನಂದ ಮುಖೋಪಾಧ್ಯಾಯ ಅವರೊಂದಿಗೆ ಜೀವಮಾನದ ಸ್ನೇಹವನ್ನು ಪ್ರಾರಂಭಿಸಿದರು, ಅವರು ಅವರ ಸಹಪಾಠಿಯಾಗಿದ್ದರು. ನಂತರ ಅವರು ಮಾಥ್ರುನ್ ಹೈ ಇಂಗ್ಲಿಷ್ ಶಾಲೆಗೆ ವರ್ಗಾವಣೆಗೊಂಡು, ಮುಖ್ಯೋಪಾಧ್ಯಾಯ ಮತ್ತು ಕವಿ ಕುಮುದ್ ರಂಜನ್ ಮಲ್ಲಿಕ್ ಅವರ ಅಡಿಯಲ್ಲಿ ಅಧ್ಯಯನ ಮಾಡಿದರು. ಶಾಲಾ ಶುಲ್ಕವನ್ನು ಪಾವತಿಸುವುದನ್ನು ಮುಂದುವರಿಸಲು ಸಾಧ್ಯವಾಗದೆ, ನಜ್ರುಲ್ ಇಸ್ಲಾಂ ಶಾಲೆಯನ್ನು ತೊರೆದು ಕವಿಯಲ್‌ಗಳ ಗುಂಪನ್ನು ಸೇರಿದರು . ನಂತರ ಅವರು ಆ ಪ್ರದೇಶದ ಪ್ರಸಿದ್ಧ ಬೇಕರಿ ವಾಹಿದ್ ಮಿಠಾಯಿ ಮತ್ತು ಅಸನ್ಸೋಲ್ ಪಟ್ಟಣದ ಚಹಾ ಅಂಗಡಿಯಲ್ಲಿ ಅಡುಗೆಯವರಾಗಿ ಕೆಲಸ ಮಾಡಿದರು.

ನಾಗತಿಹಳ್ಳಿ ರಮೇಶ್ ರವರು ಕಾಜಿ ನಜ್ರುಲ್ ಇಸ್ಲಾಂ ರ ಬಗ್ಗೆ ಬರೆದಿರುವ ಒಂದು ಪದ್ಯ ಹೀಗಿದೆ;

‘ಮುಂಜಾನೆ,
ಆಗಸದಲ್ಲಿ ಬೆಳದಿಂಗಳ ಚೆಲ್ಲಿ ಹೊಳೆವ ಚಂದ್ರ
ಸೂರ್ಯನು ಬರುವ ಹಾದಿಗೆ ಚಂದ್ರ ಕನ್ನಡಿಯಾದಂತೆ
ಅತ್ತ ದೂರದಲ್ಲಿ ನೆಲದ ತುತ್ತ ತುದಿಯಲ್ಲಿ ಮೇಲೇಳ ಹೊರಟ ಸೂರ್ಯ
ತನುಮನವು ಒಂದಾದಾಗ ಆಡಿದ ಮಾತೆಲ್ಲವೂ ಪ್ರವಾದಿಯ ಮಾತುಗಳು
ನಡೆದ ನಡೆಗೆಗಳೆಲ್ಲ ಪ್ರವಾದಿಯ ನಡಿಗೆಗಳು
ಭಗವದ್ಗೀತೆ, ಕುರಾನ್ ನ ಹೃದಯ ಸರೋವರಕೆ ಬಿದ್ದರು
ಕಾಜಿ ನಜ್ರುಲ್ ಇಸ್ಲಾಂ ಮೇಲೆದ್ದರು ರೆಕ್ಕೆಗಳ ಬೀಸುತ್ತಾ,
ಬೀಸುವ ಗಾಳಿಗೆ ಮೈಯೆಲ್ಲಾ ರೆಕ್ಕೆ ; ಕಲೆ ಕವಿತೆ ನಾಟಕ ಸಂಗೀತ ಗಾಯನ ಸೈನಿಕ ಪತ್ರಕರ್ತ
ಸಕ್ರಿಯ ರಾಜಕೀಯ ಕಾರ್ಯಕರ್ತ,
ಬೀಸುವ ಬಿರುಗಾಳಿ, ತಣ್ಣಗೆ ಕೊರೆವ ಹಿಮದ ಕಣ್ಣು
ಆಕಾಶದ ಬೆಂಕಿ, ಒಲುಮೆಯ ಸಾಕ್ಷಾತ್ಕಾರಿ, ಸಂತ
ಬೀಸುವ ಬಣ್ಣದ ರೆಕ್ಕೆಗಳು ಎರಡೇ , ಪುಕ್ಕಗಳು ಲಕ್ಷಾಂತರ
ದುಃಖ ಇರುವಲ್ಲೆಲ್ಲ ಗರುಡದ ಹಾರಾಟ
ಅಮೃತಕಾರಿದ ಗರುಡ
ಅಮೃತವ ತಂದೇ ತರುವೆನೆಂಬ ಹಠ ಬರೆದ ಕಾವ್ಯದಲ್ಲಿ,
ಆಡಿದ ನಾಟಕದಲ್ಲಿ,
ಹಾಡಿದ ಹಾಡಲ್ಲಿ ಅಮೃತಧಾರೆ ಬಾಯಾರಿ ಗಾಯಗೊಂಡ ಹೃದಯಗಳಿಗೆ

ಜೀವ ಸಂಕುಲದಲಿ ಒಂದೇ ರಕ್ತ ಹರಿದು ಬಂದಿದೆ
ತಾಯಂದಿರ ಹೃದಯದಿಂದ ಜಾತಿ ಮತ ಧರ್ಮಗಳ ದಾಟಿ
ಒಲವಿನ ಮಾನವೀಯತೆಯ ಮರದ ನೆರಳಲಿ ಒಂದಾಗಿ ಬನ್ನಿ
ಹಲವು ಝರಿಗಳು ಒಂದಾಗಿ ಹಳ್ಳವಾದಂತೆ
ಹಳ್ಳ ಹಳ್ಳಗಳು ಸೇರಿ ಹೊಳೆಯಾದಂತೆ
ಹೊಳೆ ಹೊಳೆಗಳು ಸೇರಿ ನದಿಯಾದಂತೆ
ನದಿ ನದಿಗಳು ಸೇರಿ ಸಮುದ್ರವಾದಂತೆ

ದೇಶದ ಗಡಿಗಳೆಂದರೆ ದೇಹದ ಗಡಿಗಳು
ಬದುಕುತ್ತೇವೆ ನಾವು ಉರಿವ ಕರ್ಪೂರದಂತೆ
ದೇಶಗಳ ಗಡಿಗಳ ಮೀರಿ ಹಾರಿ
ಜ್ಞಾನ ಕೋಶಗಳ ಮಿತಿಮೀರಿ
ಸುರಿವಾ ಮಳೆಯಲಿ ನೆನೆಯದೆ ಮೋಡದ ಮೇಲೆ ಹಾರಿದೆ
ವಿಶ್ವ ಮಾನವ ಸಂದೇಶ ; ಸರಳತೆ
ಜಾತ್ಯಾತಿತತೆ ಜಾತಿ-ಧರ್ಮ-ಭಾಷೆ-ಭೇದವಿಲ್ಲದ ಮಾನವೀಯತೆ ಆತ್ಮಸಾಕ್ಷಿಯ ಸಾಕ್ಷಾತ್ಕಾರ
ಪ್ರೀತಿ-ಪ್ರೇಮ-ಸಮತೆ ಜೀವ ಕಾರುಣ್ಯ
ಕಾಡ ತುಂಬಾ ಹಬ್ಬಿದ ಕಾಡುಬಳ್ಳಿಯ ಹೂಗಳ ಸ್ವರ್ಗದ ಸುವಾಸನೆ

ಸಂತೆ ಬೀದಿಗಳಲ್ಲಿ, ಜನಜಾತ್ರೆಗಳೊಳಗೆ ಊರುಕೇರಿಗಳೊಳಗೆ ಅಲೆ ಅಲೆವ ಧ್ವನಿಯು ಪ್ರತಿದ್ವನಿಯು
ಸಂತ ಕಾಜಿ ನಜ್ರುಲ್ ಇಸ್ಲಾಂರ ಕಂಠದಿಂದ

ದೇಶ ದೇಶಗಳ ಸುತ್ತಿ ಸುಳಿವ ಗಾಳಿಯು ಒಂದೇ
ಈ ನೆಲಕ್ಕೂ ನಮಗೂ ನಿಮಗೂ, ಕುಡಿಯುವ ನೀರು ಒಂದೇ
ತಿನ್ನುವ ಅನ್ನ ಒಂದೇ ಭಿನ್ನ ಭೇದದ ಮೇಲು ಕೀಳಿನ ಮಾತು ಕೈಬಿಡಿ ಮಾನವರೇ ನಾವೆಲ್ಲ ಒಂದೇ ಎದೆತಟ್ಟಿ ಮುಂದೆ ಬನ್ನಿ
ಪರ್ವತದ ತುದಿಯಲ್ಲಿ ಹಾಡು ಹಾಡುತ್ತ ಸಂತ ಕವಿ ಕಾಜಿ ನಜ್ರುಲ್ ಇಸ್ಲಾಂ’

                                  - ನಾಗತಿಹಳ್ಳಿ ರಮೇಶ್

ನಾಗತಿಹಳ್ಳಿ ರಮೇಶ್, ಕಡು ಬಡತನದಲ್ಲಿ ಬೆಳೆದ ಇವರು, ಬಾಲ್ಯದಲ್ಲಿ ಮಾತಾಡುವಾಗ ಬಿಕ್ಕಳಿಗನಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅದನೊಂದು ಚಾಲೆಂಜ್ ಆಗಿ ಸ್ವೀಕರಿಸಿ ಗುರುಗಳ ಪ್ರೋತ್ಸಾಹದೊಂದಿಗೆ ಅವರೆದುರೇ ಒಬ್ಬ ಚರ್ಚಾಪಟುವಾಗಿ ಬೆಳೆದು, ವಿಜ್ಞಾನದ ವಿದ್ಯಾರ್ಥಿಯಾಗಿ, ಕಾನೂನು ಪದವೀಧರರಾಗಿ ಅಸಾಧಾರಣ ಚರ್ಚಾಪಟುವಾಗಿ ಬೆಳೆದು150 ಚರ್ಚಾ ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿದವರು. ನಾಗತಿಹಳ್ಳಿ ರಮೇಶ್ ರವರು ಸೈಕಲ್ ತುಳಿದು ಮನೆ ಮನೆಗೆ ಪತ್ರಿಕೆಗಳಾಕ್ಕುತ್ತ ತಾನೊಬ್ಬ ಪತ್ರಕರ್ತನಾಗಬೇಕು ಎಂದು ಕನಸು ಕಂಡು ‘ಸ್ಪರ್ಧಾ ಪ್ರಪಂಚ’ ವೆಂಬ ಮಾಸ ಪತ್ರಿಕೆಯ ಯಶಸ್ವಿ ಸಂಪಾದಕರಾದವರು.

ನಾಗತಿಹಳ್ಳಿ ರಮೇಶ್ ಅವರ ಕುರಿತ ನನ್ನ ಈ ಕೆಳಗಿನ ಕವನ ಹೀಗಿದೆ ;

ಅಣ್ಣನಾಗುವ ಬಗೆ ಹೀಗೆ….

ಬಡತನದ ಕೂಫದ
ಬೀದಿಯ ತಿರುವಿನಲಿ
ಕೊನೆಯ ಮನೆಯೊಳಗೆ
ಕಣ್ಣೋರೆಸಿಕೊಳ್ಳುತ್ತಾ
ಮುಂಜಾನೆಯೇ ಸುಪ್ರಭಾತವಾಗಿ
ಪದಗಳಾಡುತ್ತ ಕುಳಿತ ಅವ್ವನ ಮುಖ ನೋಡಿದವ
ಮುಂಜಾನೆಯೇ ದೂರದ ಆಟದ ಮೈದಾನದೊಳಗಿನಿಂದ
ತೇಲಿಬರುವ ಚಪ್ಪಾಳೆ ನೋಡಲೆಂದು ಓಡೋಡಿ ಹೋದವ
ಚಪ್ಪಾಳೆ ಕೇಳಿ ಖುಷಿಗೊಂಡವ
ಆಗಿನ್ನೂ ಪುಟ್ಟ ಬಾಲಕ ರಮೇಶ

ಚಪ್ಪಾಳೆ ಸದ್ದಿನೊಳಗಿನ ಶಬ್ದದಿಂದ
ತನಗೇರಡು ರೆಕ್ಕೆಗಳ ಕಟ್ಟಿಕೊಂಡವ
ಬಡತನದ ಕೂಫದಿಂದ ರೆಕ್ಕೆ ಬಡಿಯುತ್ತ
ಬಡಿಯುತ್ತ ಹೊರಗಾರಿ
ಕೂಫದೊಳಗಿನ ತನ್ನವರತ್ತ ಕೈ ಚಾಚಿದವ
ನಂಬಿ ಬಂದವರ ದಡಕ್ಕೆ ಹತ್ತಿಸಿದವನೀಗ
ನಾಗತಿ ಹಳ್ಳಿ ರಮೇಶಣ್ಣ
ಅಣ್ಣನಾಗುವ ಬಗೆ ಹೀಗೆ

ಸೋಲನ್ನು ಗೆಲುವಾಗಿಸುವ
ಆ ಚಪ್ಪಾಳೆ ಶಬ್ದದಲಿ
ಅದಾವ ಮಾಂತ್ರಿಕತೆ ಅಡಗಿದೆಯೋ
ಅದಾವ ಮಂತ್ರದ ಸೋಲ್ಲಿದೆಯೋ ಆ ಶಬ್ದದೊಳಗೆ
ಲಕ್ಷ ಅವಮಾನಗಳ ನಡುವೆ ಎದೆಗಾರಿಕೆಯ
ಬಿಟ್ಟುಕೊಡದ ಅಂಬೇಡ್ಕರ್ ರಿಗೆ ಗೊತ್ತಿತ್ತು
ಆ ಚಪ್ಪಾಳೆಯ ಗುಟ್ಟು
ಸೋಲ ಗೆಲುವಾಗಿಸುವ ಚಪ್ಪಾಳೆ ಎಂಬ ಆ ದೇವತೆಯ ಶಕ್ತಿ,

ಸೋಲೆಂಬ ಮರಳುಗಾಡಲ್ಲಿ ನೀರನರಸಿ ಅಲೆವಂತೆ ಗೆಲುವು
ಯಾರದೋ ಚಪ್ಪಾಳೆ ಶಬ್ದ ತಟ್ಟಿ ಕರೆಯುವುದು
ನೀರಿರುವ ತಾವಿಗೆ
ಆದರ್ಶಗಳ ಕಾಲುಗಳು ಬೇಕು
ಅಲ್ಲಿಗೆ ನೆಡೆಯಲಿಕ್ಕೆ
ಮಗುವಿನ ಕಣ್ಣುಗಳು ಬೇಕು
ಬತ್ತದಾ ಆ ಜಲವ ನೋಡಲಿಕ್ಕೆ
ಮಾನವೀಯತೆಯ ಬೊಗಸೆ ಬೇಕು
ನೀರೇತ್ತಿ ಕುಡಿಯಲ್ಲಿಕ್ಕೆ
ಕರುಣೆಯ ತುಟಿಗಳು ಬೇಕು
ಆ ನೀರ ಚುಂಬಿಸಲು
ದಾಹ ಬೇಕು ತಾನಾರೆಂಬ ಅರಿವು ಬೇಕು

ಆ ಯಕ್ಷ ಜಲ ಮೂಲದ ದಡದಲ್ಲಿ
ಒಗಟ ಬಿಚ್ಚಿದರಷ್ಟೇ ನೀರು
ಆಶರೀರ ವಾಣಿಯಲಿ ನುಡಿವ ಯಕ್ಷಿಯರು
ಒಗಟ ಬಿಚ್ಚಿದರಷ್ಟೇ ನೀರು
ಇಲ್ಲವಾದರೇ ಸಾವು…

“ಚಪ್ಪಾಳೆ ಎಂದರೇನು…?”

        ~ಫೀನಿಕ್ಸ್ ರವಿ

90ರ ದಶಕದ ನಾಗತಿಹಳ್ಳಿ ರಮೇಶ್ ರೂಪಿಸಿದ ‘ಸ್ಪರ್ಧಾ ಪ್ರಪಂಚ’ ಮಾಸಿಕ ಆ ಪತ್ರಿಕಾ ಕ್ಷೇತ್ರಕ್ಕೆ ಹೊಸ ಮುಂಗಾಣ್ಕೆಯನ್ನು ಕೊಟ್ಟಿತು. ಪತ್ರಿಕೆಯಲ್ಲದೆ ಮುದ್ರಣ ಕ್ಷೇತ್ರಕ್ಕೂ ಕೈಹಾಕಿ ಅಲ್ಲಿಯೂ ಅಸಾಧಾರಣ ಯಶಸ್ಸು ಕಂಡ ರಮೇಶ್, ಅಲ್ಲಿಯೂ ಹೊಸ ಸಾಧ್ಯತೆಗಳನ್ನು ತೆರೆದರು. ಕಿರುಚಿತ್ರ ನಿರ್ಮಾಣ, ಪ್ತಕಾಶನ, ಸಾಕ್ಷ್ಯಚಿತ್ರ, ಪರಿಸರ ಚಿಂತನೆ, ವ್ಯವಸಾಯ, ಸಿನಿಮಾಸಕ್ತಿ, ಬದ್ಧತೆಯ ರಾಜಕಾರಣದೊಡನಾಟ ಅವರ ಹಲವು ಕ್ಷೇತ್ರವಲಯಗಳು. ‘ಸೃಷ್ಟಿ’ ಪ್ರಕಾಶನವನ್ನು ಆರಂಭಿಸಿ ಹಲವು ಅಮೂಲ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಅವರ ‘ಸಮುದ್ರ ಮತ್ತು ಮಳೆ’ ಕವಿತೆಗಳ ಕಟ್ಟು ಕನ್ನಡದಲ್ಲಿಯೇ ಹೊಸ ಸಂವೇದನೆ ಸ್ಫುರಿಸುವ ಸಂಕಲನ. ಸಮಾಜ, ವ್ಯಕ್ತಿಯೊಳಗಿನ ಅವಗುಣಗಳನ್ನೂ ಮಾನವೀಯ ನೆಲೆಗಟ್ಟಿನ ಮೂಲಕ ಮುಖಾಮುಖಿಯಾಗಬೇಕೆಂಬ ಆಶಯವುಳ್ಳದ್ದು.
ಈ ಕೃತಿ ಇಂಗ್ಲಿಷ್ ನಲ್ಲಿ The sea and The rain (ಅನುವಾದ ಅಂಕುರ್ ಬೆಟಗೇರಿ) ಹೆಸರಿನಲ್ಲಿಯೂ ‘ಸಾಗರ್ ಔರ್ ಬಾರಿಷ್’ (ಅನುವಾದ ಗಿರೀಶ್ ಜಕಾಪುರೆ ) ಹೆಸರಿನಲ್ಲಿ ಹಿಂದಿಯಲ್ಲಿಯೂ ಪ್ರಕಟವಾಗಿದೆ.
ಇವರ ಕವಿತೆಗಳು ಭಾರತದ ಕೆಲವು ಭಾಷೆಗಳಲ್ಲದೆ, ವಿದೇಶಿ ಭಾಷೆಗಳಿಗೂ ಅನುವಾದಗೊಂಡಿವೆ. ಅಲ್ಲದೆ,
ಕೆಲವು ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಇವರ ಕವಿತೆಗಳು ಪಠ್ಯಗಳಾಗಿವೆ.
ಅವರ ಕಾವ್ಯದಂತೆಯೇ ಅವರ ಸಮಾಜಮುಖಿ ಚಟುವಟಿಕೆಗಳೆಲ್ಲವೂ ಬುದ್ಧನ ಕಾರುಣ್ಯವನ್ನು ನೆನಪಿಸುತ್ತವೆ.
ಅವರ ಜೀವಪದಗಳಾದ ‘ಅವ್ವ ‘, ತಿಳಿ’, ‘ಪದಪದ ಚರಿತ’, ‘ಜೀವಜೀವದ ಹಾಡು’, ಬಯಲ ಕನ್ನಡಿ’, ‘ಮನದ ಮಿಂಚು’, ‘ಒಳಿತು’,’ ಮಳೆಕಾವು,
ಮುಂತಾದ ಹಾಡುಗಳ ಆಲ್ಬಮ್ ಗಳು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಹೊಸ ಛಾಪನ್ನೇ ಮೂಡಿಸಿವೆ. ಈ ಜೀವಪದಗಳ ಸರಣಿಯನ್ನು ರೂಪಿಸುವಲ್ಲಿ ನಾಗತಿಹಳ್ಳಿ ರಮೇಶ್ ವಹಿಸಿರುವ ಶ್ರಮ ಅಪಾರ. ಹಾಡುಗಳ ಸರಣಿಗಳಲ್ಲದೆ ನಾಗತಿಹಳ್ಳಿ ರಮೇಶ್ ಹಲವು ಕಿರುಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

೧೯೧೪ ರಲ್ಲಿ, ನಜ್ರುಲ್ ಇಸ್ಲಾಂ ಮೈಮೆನ್ಸಿಂಗ್ ಜಿಲ್ಲೆಯ ತ್ರಿಶಾಲ್‌ನಲ್ಲಿರುವ ದರಿರಾಂಪುರ್ ಶಾಲೆಯಲ್ಲಿ (ಈಗ ಸರ್ಕಾರಿ ನಜ್ರುಲ್ ಅಕಾಡೆಮಿ) ಅಧ್ಯಯನ ಮಾಡಿದರು . ಇತರ ವಿಷಯಗಳ ಜೊತೆಗೆ, ನಜ್ರುಲ್ ಇಸ್ಲಾಂ ಅವರು ಬಂಗಾಳಿ, ಸಂಸ್ಕೃತ , ಅರೇಬಿಕ್, ಪರ್ಷಿಯನ್ ಸಾಹಿತ್ಯ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಶಿಕ್ಷಕರಿಂದ ಅಧ್ಯಯನ ಮಾಡಿದರು, ಅವರು ಅವರ ಸಮರ್ಪಣೆ ಮತ್ತು ಕೌಶಲ್ಯದಿಂದ ಪ್ರಭಾವಿತರಾದರು.

ನಜ್ರುಲ್ ಇಸ್ಲಾಂ 10 ನೇ ತರಗತಿಯವರೆಗೆ ಅಧ್ಯಯನ ಮಾಡಿದರು ಆದರೆ ಮೆಟ್ರಿಕ್ಯುಲೇಷನ್ ಪೂರ್ವ ಪರೀಕ್ಷೆಗೆ ಹಾಜರಾಗಲಿಲ್ಲ ; ಬದಲಿಗೆ 1917 ರಲ್ಲಿ, ಅವರು ಹದಿನೆಂಟು ವರ್ಷ ವಯಸ್ಸಿನಲ್ಲಿ ಬ್ರಿಟಿಷ್ ಭಾರತೀಯ ಸೇನೆಗೆ ಸೇರಿದರು. ಬ್ರಿಟಿಷ್ ಭಾರತೀಯ ಸೇನೆಗೆ ಸೇರಲು ಅವರಿಗೆ ಎರಡು ಪ್ರಾಥಮಿಕ ಪ್ರೇರಣೆಗಳಿದ್ದವು: ಮೊದಲನೆಯದಾಗಿ, ಸಾಹಸದ ಬಗ್ಗೆ ಯುವ ಬಯಕೆ ಮತ್ತು ಎರಡನೆಯದಾಗಿ, ಆ ಕಾಲದ ರಾಜಕೀಯದಲ್ಲಿ ಆಸಕ್ತಿ. 49 ನೇ ಬಂಗಾಳ ರೆಜಿಮೆಂಟ್‌ಗೆ ಸೇರಿದ ಅವರನ್ನು ಕರಾಚಿ ಕಂಟೋನ್ಮೆಂಟ್‌ಗೆ ನಿಯೋಜಿಸಲಾಯಿತು, ಅಲ್ಲಿ ಅವರು ತಮ್ಮ ಮೊದಲ ಗದ್ಯ ಮತ್ತು ಕಾವ್ಯವನ್ನು ಬರೆದರು. ಅವರು ಎಂದಿಗೂ ಸಕ್ರಿಯ ಹೋರಾಟವನ್ನು ನೋಡಿಲ್ಲದಿದ್ದರೂ, ಅವರು ಕಾರ್ಪೋರಲ್‌ನಿಂದ ಹವಿಲ್ದಾರ್ (ಸಾರ್ಜೆಂಟ್) ಹುದ್ದೆಗೆ ಏರಿದರು ಮತ್ತು ಅವರ ಬೆಟಾಲಿಯನ್‌ಗೆ ಕ್ವಾರ್ಟರ್‌ಮಾಸ್ಟರ್ ಆಗಿ ಸೇವೆ ಸಲ್ಲಿಸಿದರು .

ಈ ಅವಧಿಯಲ್ಲಿ, ನಜ್ರುಲ್ ಇಸ್ಲಾಂ ರವೀಂದ್ರನಾಥ ಟ್ಯಾಗೋರ್ ಮತ್ತು ಶರತ್ ಚಂದ್ರ ಚಟ್ಟೋಪಾಧ್ಯಾಯ ಹಾಗೂ ಪರ್ಷಿಯನ್ ಕವಿಗಳಾದ ಹಫೀಜ್ , ಒಮರ್ ಖಯ್ಯಾಮ್ ಮತ್ತು ರೂಮಿ ಅವರ ಕೃತಿಗಳನ್ನು ವ್ಯಾಪಕವಾಗಿ ಓದಿದರು . ಅವರು ರೆಜಿಮೆಂಟ್‌ನ ಪಂಜಾಬಿ ಮೌಲ್ವಿಯಿಂದ ಪರ್ಷಿಯನ್ ಕಾವ್ಯವನ್ನು ಕಲಿತರು , ಸಂಗೀತವನ್ನು ಅಭ್ಯಾಸ ಮಾಡಿದರು ಮತ್ತು ಅವರ ಸಾಹಿತ್ಯಿಕ ಆಸಕ್ತಿಗಳನ್ನು ಅನುಸರಿಸಿದರು. ಅವರ ಮೊದಲ ಗದ್ಯ ಕೃತಿ “ಲೈಫ್ ಆಫ್ ಎ ವಾಗಬಾಂಡ್” ( ‘ ಬೌಂಡುಲರ್ ಆತ್ಮಕಹಿನಿ ‘), ಮೇ 1919 ರಲ್ಲಿ ಪ್ರಕಟವಾಯಿತು. ಅವರ ಕವಿತೆ “ಮುಕ್ತಿ” (“ಮುಕ್ತಿ”, ‘ಸ್ವಾತಂತ್ರ್ಯ’) ಅನ್ನು ಜುಲೈ 1919 ರಲ್ಲಿ ಬಂಗಾಳಿ ಮುಸ್ಲಿಂ ಸಾಹಿತ್ಯ ಜರ್ನಲ್ ( ಬಂಗಿಯಾ ಮುಸಲ್ಮಾನ್ ಸಾಹಿತ್ಯ ಸಮಿತಿ ) ಪ್ರಕಟಿಸಿತು.

ನಜ್ರುಲ್ ಇಸ್ಲಾಂ ಮುಸ್ಲಿಂ ಆಗಿ ಜನಿಸಿದರು, ಆದರೆ ಧಾರ್ಮಿಕ ಸಮನ್ವಯದಲ್ಲಿ ಹೆಚ್ಚಾಗಿ ತೊಡಗಿದ್ದರು, ಅವರನ್ನು ಸಾಮಾನ್ಯ ಜನರು ಹೆಮ್ಮೆಯ ಬಹುತ್ವವಾದಿ ಎಂದು ಮಾತ್ರ ನೋಡುತ್ತಿದ್ದರು. ನಜ್ರುಲ್ ಇಸ್ಲಾಂ 1920 ರಲ್ಲಿ ಜೂಗ್ ಬನಿಯಲ್ಲಿ ಧಾರ್ಮಿಕ ಬಹುತ್ವದ ಬಗ್ಗೆ ಸಂಪಾದಕೀಯ ಬರೆದರು,

ಬಾ ಸಹೋದರ ಹಿಂದೂ! ಬಾ ಮುಸಲ್ಮಾನ! ಬಾ ಬೌದ್ಧ! ಬಾ ಕ್ರೈಸ್ತ! ಎಲ್ಲಾ ಅಡೆತಡೆಗಳನ್ನು ಮೀರೋಣ, ಎಲ್ಲಾ ಕ್ಷುದ್ರತೆ, ಎಲ್ಲಾ ಸುಳ್ಳು, ಎಲ್ಲಾ ಸ್ವಾರ್ಥವನ್ನು ಶಾಶ್ವತವಾಗಿ ತ್ಯಜಿಸೋಣ ಮತ್ತು ಸಹೋದರರನ್ನು ಸಹೋದರರೆಂದು ಕರೆಯೋಣ. ನಾವು ಇನ್ನು ಮುಂದೆ ಜಗಳವಾಡುವುದಿಲ್ಲ.

ಗಣಬನಿಯಲ್ಲಿ ಸೆಪ್ಟೆಂಬರ್ 2, 1922 ರಂದು ಪ್ರಕಟವಾದ ಹಿಂದೂ ಮುಸಲ್ಮಾನ್ ಎಂಬ ಮತ್ತೊಂದು ಲೇಖನದಲ್ಲಿ , ಧಾರ್ಮಿಕ ಜಗಳಗಳು ಪುರೋಹಿತರು ಮತ್ತು ಇಮಾಮ್‌ಗಳ ನಡುವೆಯೇ ಹೊರತು ಸಾಮಾನ್ಯ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಅಲ್ಲ ಎಂದು ಅವರು ಬರೆದಿದ್ದಾರೆ. ಪ್ರವಾದಿಗಳು ದನಗಳಂತೆ ಆಸ್ತಿಯಾಗಿದ್ದಾರೆ ಆದರೆ ಅವರನ್ನು ಎಲ್ಲಾ ಮನುಷ್ಯರಿಗೆ ಬೆಳಕಿನಂತೆ ಪರಿಗಣಿಸಬೇಕು ಎಂದು ಅವರು ಬರೆದಿದ್ದಾರೆ.

ನಾಗತಿಹಳ್ಳಿ ರಮೇಶ್ ರವರು ಬರೆದಿರುವ ‘ಕೂಡೋಣ ಕಟ್ಟೋಣ ಬಾಳೋಣ ಬೆಳಗೋಣ….’ಇದೊಂದು ದಿವ್ಯ ಮಂತ್ರ ವಾಕ್ಯ. ಈ ಸಾಹಿತ್ಯವು ಸಂಗೀತದ ಹಾಡಗಿ ಹೊರ ಬಂದಿದೆ.

ಈ ದಿವ್ಯ ಮಂತ್ರ ವಾಕ್ಯದ ಆಳಕ್ಕೆ ಇಳಿದರೆ, ಇದು ಇವರ ಮಾನವೀಯತೆಯ ಮಂತ್ರವೂ ಹೌದು. ಇನ್ನೂ ಆಳಕ್ಕೆ ಇಳಿದರೆ ಸಮಾಜವಾದವೆಂಬ ಜಗತ್ತಿನ ಎಲ್ಲಾ ಕಾಲಕ್ಕೂ ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ಸಿದ್ಧಾಂತದ ಹೆಸರೊಂದು ಕೋಟಿ ಸೂರ್ಯರಂತೆ ಮಿನುಗುತ್ತದೆ. ಈ ದಿವ್ಯ ಮಂತ್ರ ವಾಕ್ಯದ ಬೇರುಗಳು ಪ್ರಜಾಪ್ರಭುತ್ವ ಎಂಬ ಸಿದ್ಧಾಂತದ ಹೃದಯದಲ್ಲಿವೆ. ಮನುಷ್ಯರ ಸರಳತೆ, ಆದರ್ಶ, ಒಲುಮೆ, ಪ್ರೇಮ, ಮಾನವೀಯತೆ, ಸಜ್ಜನಿಕೆ, ವಿನಯತೆ ಮತ್ತು ಕೃತಜ್ಞತೆ, ಕರುಣೆಯೊಂದಿಗೆ ಅರಳಿದ ಹೂವು ಸಮಾಜವಾದವು. ಪ್ರಜಾಪ್ರಭುತ್ವ ಎಂಬ ಮಹಾತಾಯಿಯ ಮಗಳು ಈ ಸಮಾಜವಾದವೆಂಬುದು. ಸಮಾಜವಾದಕ್ಕೆ ಕೂಡಿ ಕಟ್ಟಿ ಬಾಳುವ ಅನಂತ ಶಕ್ತಿ ಇದ್ದರೆ, ನಾಗತಿಹಳ್ಳಿ ರಮೇಶ್ ರವರ ‘ಕೂಡೋಣ ಕಟ್ಟೋಣ ಬಾಳೋಣ ಬೆಳಗೋಣ….’ ಈ ದಿವ್ಯ ಮಂತ್ರದ ಸಾಧ್ಯತೆಗಳು ಸಮಾಜವಾದವ ಮೀರಿ ಧಾರ್ಮಿಕತೆಯ ಒಳಿತಿನ ಗುರುತಾದ ‘ಬೆಳಗೋಣ ‘ ಎಂಬ ಪದವು, ಇಂದಿನ ‘ಸಮಾಜವಾದ’ ಸಾಗಬೇಕಾದ ಹೊಸ ಬೆಳಕಿನ ಹಾದಿಯನ್ನು ಕಾಣಿಸುತ್ತದೆ. ಆ ಮೂಲಕ, ಈ ದಿವ್ಯ ಮಂತ್ರ ವಾಕ್ಯದ ಶಕ್ತಿಯನ್ನು ನಮಗೆ ಕಾಣಿಸುತ್ತದೆ. ಇದು ಆಸ್ತಿವಂತರ- ಹಣಕಾಸುವಂತರ ಪರನಿಲ್ಲದೆ ಇದು ಹಣವಂತರೇ, ಆಸ್ತಿವಂತರೇ, ಬನ್ನಿ ಜೊತೆಯಾಗಿ ನಮ್ಮೊಂದಿಗೆ, ಈ ನಾಡಿನ, ಈ ದೇಶದ, ಈ ಜಗತ್ತಿನ ಎಲ್ಲರೂ ನಾವೆಲ್ಲಾ ಒಂದೇ ಎಂದು ಅಭಿವೃದ್ಧಿಯತ್ತ ವಿಶಾಲ ದಿವ್ಯ ಹೃದಯದಿಂದ ‘ಕೂಡೋಣ ಕಟ್ಟೋಣ ಬಾಳೋಣ ಬೆಳಗೋಣ…. ಬನ್ನಿ’ ಎಂದು ಕರೆಯುತ್ತದೆ. ಈ ಮೂಲಕ ನಮಗೆ ನೆನಪಾಗುವ ಹಿರಿಯ ಕವಿ ಬಂಕೀಮ ಚಂದ್ರ ಚಟ್ಟೋಪಾಧ್ಯಾಯರವರು ‘ವಂದೇ ಮಾತರಂ’ ಗೀತೆ ಬರೆದು ಭಾರತ ದೇಶದ ಸಮಸ್ತ ಭಾರತೀಯರನ್ನು ಒಂದು ಒಗ್ಗಟ್ಟಿನ ಮಾನವ ಸರಪಳಿಯಾಗಿಸುವ ಅವರ ಉದ್ದೇಶವು ಈಡೇರಿ, ಅಂದು ಇಂದು ಮತ್ತು ಮುಂದು, ‘ವಂದೇ ಮಾತರಂ’ ಗೀತೆಯು ಭಾರತೀಯರ ಹೃದಯದ ಹಾಡಾಗಿದೆ. ಈ ಪ್ರಜಾಪ್ರಭುತ್ವ ದೇಶದಲ್ಲಿ ಇಂದು, ರಾಜಕೀಯವಾಗಿ ಸಾಮಾಜಿಕವಾಗಿ ಮತ್ತು ಸಾಹಿತ್ಯಕವಾಗಿ, ಕಲೆ, ವೈಜ್ಞಾನಿಕವಾಗಿ, ಭಾರತದಾದ್ಯಂತ ನೂರಾರು ಪಕ್ಷ ಸಿದ್ಧಾಂತಗಳು ಅಧಿಕಾರ ಪಡೆದಿವೆ ಮತ್ತು ಅಧಿಕಾರ ಪಡೆಯಲು ಹಣಿಯಾಗುತ್ತಿವೆ. ಹಾಗೂ ಇವುಗಳಲ್ಲಿ ಮುಕ್ಕಾಲು ಪಾಲು ಪಕ್ಷಗಳು ಕಾನೂನು ಬದ್ಧವಾಗಿಯೇ ಸರ್ಕಾರಿ ಖಜಾನೆಗೆ ಕನ್ನ ಹಾಕುವ ಹೊಸ ಕುತಂತ್ರಗಳನ್ನು ಕಲಿತಿವೆ.

ಈ ದೇಶದ ಹಲವಾರು ರಾಜಕೀಯ ಪಕ್ಷಗಳು ರಾಜಕಾರಣವನ್ನು ಬಂಡವಾಳಶಾಹಿಗಳ ಬಿಜಿನೆಸ್ ಕೇಂದ್ರಗಳಾಗಿಸಿಕೊಂಡು ಭ್ರಷ್ಟಾಚಾರ, ಸುಲಿಗೆ ಮತ್ತು ಹಗರಣಗಳಲ್ಲಿ ಮುಳುಗಿ ಹೋಗಿವೆ. ಆದರ್ಶ, ಮಾನವೀಯತೆ, ಕರುಣೆ, ಸತ್ಯ, ದಯೆ, ಒಲುಮೆ, ಪ್ರೇಮ ಮರೆತ ಇಂತಹ ರಾಜಕೀಯ ಪಕ್ಷಗಳು, ಸರಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ವ್ಯವಸ್ಥೆಯ ಬದಲಾಗಿ, ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಇಂತಹ ಹಲವಾರು ಕೋರ್ಸ್ ಗಳ ಕಾಲೇಜುಗಳು ಮತ್ತು ಹಾಸ್ಪಿಟಲ್ ಗಳಿಗೆ ತಾವೇ ಒಡೆಯರಾಗುವ ಮೂಲಕ, ಇಂತಹ ಸಂಸ್ಥೆಗಳನ್ನು ಬಿಜಿನೆಸ್ ಕೇಂದ್ರಗಳಾಗಿಸಿ ಜನರಿಂದ ಹಣ ಸುಲಿಗೆಯಲ್ಲಿ ತೊಡಗಿವೆ. ಈ ಮೂಲಕ ಸಮಾಜವಾದದ ಮೂಲ ತತ್ವವನ್ನು ನಾಶ ಮಾಡಿ, ಆ ಜಾಗದಲ್ಲಿ ಬಂಡವಾಶಾಹಿಗಳನ್ನು ಗದ್ದಿಗೆಗೆ ಏರಿಸಿವೆ.

ಈ ಅತಂತ್ರ ಕಾಲದಲ್ಲಿ ನಾಡಿನ ಜನರು ಒಂದಾಗಿ ಇಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಬೇಕಾದ ಅಗತ್ಯವಿದೆ. ‘ಕೂಡೋಣ ಕಟ್ಟೋಣ ಬಾಳೋಣ ಬೆಳಗೋಣ….’ ಎಂಬ ನಾಗತಿಹಳ್ಳಿ ರಮೇಶ್ ರವರ ಈ ದಿವ್ಯ ಮಂತ್ರದ ಬೆಳಕಲ್ಲಿ ಒಗ್ಗಟ್ಟಾಗಿ ಈ ನಾಡಿಗೆ ಕವಿಯಲು ಪ್ರಯತ್ನಿಸುತ್ತಿರುವ ದುಷ್ಟ ಕತ್ತಲ ಶಕ್ತಿಗಳ ವಿರುದ್ಧ ಹೋರಾಡಬೇಕಾಗಿದೆ. ವಂದನೆಗಳು.

ಅಭಿನಂದನೆಗಳು ರಮೇಶಣ್ಣ. ಶುಭವಾಗಲಿ ♥💐💐💐💐💐

Leave a Reply

Your email address will not be published. Required fields are marked *