ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದ ಪ್ರಚಾರದ ಭರಾಟೆಯಲ್ಲಿ ಹಿಂದೆ ಮುಂದೆ ಯೋಚಿಸದೆ ಬಾಯಿಗೆ ಬಂದ ಹಾಗೆ ಮಾತನಾಡುವುದು ರಾಜಕೀಯ ನಾಯಕರಿಗೆ ನೀರು ಕುಡಿದಷ್ಟು ಸಲೀಸಾಗಿದೆ, ಕಾಂಗ್ರೆಸ್ಸಿನವರನ್ನು ಬಾಡೂಟದ ವಿಷಯಕ್ಕೆ ವಿರೋಧದ ಹೇಳಿಕೆ ನೀಡಿದ ಸಿಟಿ ರವಿ, ಎಚ್.ಡಿ.ದೇವೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿ ಜೆಡಿಎಸ್‌ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರೆ.

‘ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತಾರಂತೆ ದೇವೇಗೌಡರು ಹುಟ್ಟುವುದಾದರೆ ಈಗಲೇ ಹೋಗಿ ಮತ್ತೆ ಹುಟ್ಟಿ ಬರಲಿ’ ಎಂಬ ಹೇಳಿಕೆಯನ್ನು ನೀಡಿದ ಸಿಟಿ ರವಿ ತಮ್ಮ ಹರಕು ನಾಲಗೆಯನ್ನು ಹರಿಯಬಿಟ್ಟಿರುವುದರ ಪರಿಣಾಮ ಮಂಡ್ಯದಲ್ಲಿ ಅವರ ಆಟ ನೋಡಿಸಲು ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ.

ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಲ್ಲದೆ ನಮ್ಮ ನಾಯಕರ ಸಾವನ್ನು ಬಯಸುತ್ತಿದ್ದಾರೆ ನಮ್ಮ ಪಕ್ಷದ ವರಿಷ್ಠರ ಬಗ್ಗೆ ಮಾತನಾಡುವಾಗ ಜ್ಞಾನವಿಟ್ಟುಕೊಂಡು ಎಚ್ಚರಿಕೆಯಿಂದ ಮಾತನಾಡಬೇಕೆಂದು ಮಂಡ್ಯದ ಮಳವಳ್ಳಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *