ಬೆಂಗಳೂರು : ಹರಿಯಾಣದ ಚುನಾವಣಾ ಸಮೀಕ್ಷೆ ಉಲ್ಟಾ ಹೊಡೆದಿದ್ದು, ಬಿಜೆಪಿ ಗೆಲುವನ್ನು ಸಾಧಿಸಿದೆ.ಜಮ್ಮು-ಕಾಶ್ಮೀರಾದಲ್ಲಿ ಕಾಂಗ್ರೆಸ್ ಮತ್ತು ಎನ್.ಸಿಮೈತ್ರಿ ಮಾಡಿಕೊಂಡಿರುವ ಕಾರಣ ಗೆಲುವನ್ನು ಸಾಧಿಸಿದೆ ಎಂದು ಜಮ್ಮು-ಕಾಶ್ಮೀರಾದ ಚುನಾವಣೆಯ ರಿಸಲ್ಟ್ ಕುರಿತು ಸಚಿವ ಪ್ರೀಯಾಂಕ್ ಖರ್ಗೆ ಅಭಿಪ್ರಾಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಮ್ಮುಕಾಶ್ಮೀರದ ಚುನಾವಣಾ ಫಲಿತಾಂಶದಿಂದ ಬಿಜೆಪಿಗೆ ಮುಖಭಂಗವಾಗಿದೆ.ಬಿಜೆಪಿಯವರು ಕಾಲಂ 37 ವಿಧಿಯ ಬಗ್ಗೆ ಮಾತನಾಡುತ್ತಿದ್ದರು.ಕಾಶ್ಮೀರಿ ಫೈಲ್ಸ್ ಎಂಬ ಸಿನಿಮಾವನ್ನು ಮಾಡಿದರು ಆದರೆ ಅದು ನಿರ್ಮಾಪಕ ಮತ್ತು ನಿರ್ದೇಶಕರಿಗೆ ಮಾತ್ರ ಲಾಭವಾಯಿತು ಅಷ್ಟೇ, ಅದು ಬಿಟ್ಟು ಕಾಶ್ಮೀರದ ಜನರಿಗೆ ಯಾವ್ದೇ ಉಪಯೋಗವಾಗಲಿಲ್ಲ. ಇದರಿಂದಾನೆ ತಿಳಿಯುತ್ತದೆ,ಬಿಜೆಪಿಯ ವಿಭಜನೆಯ ನೀತಿ ಕೆಲಸ ಮಾಡುತ್ತಿಲ್ಲವೆಂದು ಎಂದಿದ್ದಾರೆ.
ಇನ್ನೂ ಹರಿಯಾಣ ಎಲೆಕ್ಟನ್ ರಿಸಲ್ಟ್ ಫೈನಲ್ ಆಗಿಲ್ಲ, ನಮಗೆ ವಿಶ್ವಾಸವಿದೆ ಜನ ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.