ಬೆಂಗಳೂರು: ಇಂಡಿಯಾ ವರ್ಸಸ್ ನ್ಯೂಜಿಲ್ಯಾಂಡ್ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆಟಕ್ಕೆ ಬ್ರೇಕ್ ಹಾಕಿದ್ದ ಮಳೆರಾಯ ಈಗ ಬಿಡುವು ಕೊಟ್ಟಿದ್ದಾನೆ.ಪಂದ್ಯ ಪ್ರಾರಂಭವಾಗಿದ್ದು ಭಾರತ ಅದೇ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದೆ.
ಮಳೆ ಬರುವ ಮುನ್ನವೇ ಭಾರತ ತಂಡದ ಸರ್ಫರಾಜ್ ಶತಕವನ್ನು ಬಾರಿಸಿದ್ದು, ರಿಷಭ್ ಪಂತ್ ಆಫ್ ಸೆಂಚುರಿಯನ್ನು ಹೊಡೆದಿದ್ದಾರೆ. ಇದೀಗ ಟೀಂ ಇಂಡಿಯಾ 3 ವಿಕೆಟ್‌ಗಳ ನಷ್ಟದಿಂದ 401 ರನ್‌ಗಳನ್ನು ಗಳಿಸಿದ್ದು 46 ರನ್ನುಗಳ ಮುನ್ನಡೆಯಲ್ಲಿದ್ದಾರೆ. ಸರ್ಫರಾಜ್ ಖಾನ್ 147, ರಿಷಬ್‌ಪಂತ್ 87 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಪಂದ್ಯ ಕುತೂಹಲ ಘಟ್ಟ ತಲುಪುವ ಸಾದ್ಯತೆಯಿದೆ.