ಬೆಂಗಳೂರು: ನಾನು ಮುಡಾ ಫೈಲುಗಳನ್ನು ತಂದಿಲ್ಲ.ಬೇಕಾದರೆ ದೇವರ ಮೇಲೆ ಪ್ರಮಾಣ ಮಾಡಲು ಸಿದ್ದ ಎಂದು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಈ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರದ್ದು ತಪ್ಪಿಲ್ಲ. ಇದೆಲ್ಲಾ ಪ್ರತಿಪಕ್ಷಗಳ ರಾಜಕೀಯ ದಾಳಿಯಾಗಿದೆ ಎಂದಿರುವ ಇವರು ನಾನು ಯಾವುದೇ ಮುಡಾ ಫೈಲನ್ನು ತೆಗೆದುಕೊಂಡು ಬಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಮುಡಾ ಫೈಲ್‌ಗಳು ಬಹುಶಃ ಛಲವಾದಿ ನಾರಾಯಣಸ್ವಾಮಿ ಮನೆಯಲ್ಲಿರಬೇಕು. ಇಲ್ಲವಾದರೆ ಕುಮಾರಸ್ವಾಮಿಯವರ ಬಳಿಯಿರಬೇಕು.ಆದರೆ ನಾನು ಮಾತ್ರ ಮುಡಾದ ಫೈಲ್‌ಯಿಂದ ಒಂದೇ ಒಂದು ಸಣ್ಣ ಪೇಪರನ್ನು ತೆಗೆದುಕೊಂಡು ಬಂದಿಲ್ಲ. ನಾನು ಬೇಕಾದರೆ ಚಾಮುಂಡೇಶ್ವರಿ, ಮಂಜುನಾಥನ ಮೇಲೆ ಆಣೆ ,ಪ್ರಮಾಣ ಮಾಡಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ವಿಪಕ್ಷಗಳ ನಾಯಕರುಗಳು ಮುಡಾದಿಂದ ಫೈಲನ್ನು ರಾತ್ರೋ ರಾತ್ರಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೆಲಿಕಾಪ್ಟನಲ್ಲಿ ತಂದಿದ್ದಾರೆ. ಅವುಗಳನ್ನೇ ಇಟ್ಟುಕೊಂಡು ಸಿಎಂ ಸಿದ್ಧರಾಮಯ್ಯ ಸುದ್ದಿಗೋಷ್ಠಿಯನ್ನುನಡೆಸಿದ್ದಾರೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ. ಆದ್ದರಿಂದ ಮತ್ತೆ ಮತ್ತೆ ಹೇಳುತ್ತೇನೆ ನಾನು ಯಾವುದೇ ರೀತಿಯ ಮುಡಾ ಫೈಲ್‌ಗಳನ್ನುತೆಗೆದುಕೊಂಡು ಬಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.