ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾ ವಲಸಿಗರಿಲ್ಲವೆಂದು ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಯಲಯಹಂಕ ಸಮೀಪವಿರುವ ಕೋಗಿಲು ಲೇಔಟ್ ಅಕ್ರಮ ಮನೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಕೋಗಿಲು ಲೇಔಟ್ ಯಾವುದೇ ಅಕ್ರಮ ವಲಸಿಗರು ಕಂಡುಬಂದಿಲ್ಲವೆಂದು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾ ದೇಶದ ವಲಸಿಗರು ಇಲ್ಲ. ಅಕ್ರಮ ಮನೆ ತೆರವು ಪ್ರಕರಣದ ಕಂಪ್ಲೀಟ್ ಡೀಟೆಲ್ಸ್ ನಮಗೆ ಲಭ್ಯವಾಗಿದೆ,ಅಲ್ಲಿ ವಾಸಿಸುತ್ತಿದ್ದವರ ಪಟ್ಟಿ ಕೂಡ ತರಸಿಕೊಂಡು ನೋಡಿದ್ದೇನೆ. ಆ ಪಟ್ಟಿಯಲ್ಲೂ ಕೂಡಾ ಬಾಂಗ್ಲಾ ನಿವಾಸಿಗಳು ಕಂಡುಬಂದಿಲ್ಲ. ವಿಚಾರದ ಬಗ್ಗೆ ಹಲವು ಆರೋಪಗಳು ಕೇಳಿಬಂದಿದ್ದು, ಅವೆಲ್ಲಾ ಸುಳ್ಳು ಆರೋಪಗಳು ಎಂದು ಹೇಳಿದ್ದಾರೆ.
