ಮಂಗಳೂರು: ಹಿಜಾಬ್ ಧರಿಸಿದ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಿ ಗೇಟ್ ಹಾಕಿದ ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಅವರಿಗೆ ರಾಜ್ಯ ಪ್ರಶಸ್ತಿ ನೀಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ಉದ್ದೇಶ ಏನಿದೆ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ತಮ್ಮ ಎಕ್ಸ್ ಜಾತೆಯಲ್ಲಿ ಪ್ರಶ್ನೆ ಮಾಡಿದ್ದಾರೆ .
ಈ ವಿಷಯದ ಕುರಿತು ಟ್ವೀಟ್ ಮಾಡಿರುವ ಅವರು, ಹಿಜಾಬ್ ಪ್ರಕರಣದ ವೇಳೆಯಲ್ಲಿ ಬಾರೀ ವಿವಾದದನ್ನು ಸೃಷ್ಟಿ ಮಾಡಿದ ಪ್ರಾಂಶುಪಾಲರನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಸಮಾಜಕ್ಕೆ ಯಾವ ಸಂದೇಶ ನೀಡಲು ಬಯಸುತ್ತಿದ್ದಾರೆ? ಅವರ ಅಜೆಂಡಾ ಏನು? ಹೊಂದಾಣಿಕೆಯೋ? ಕೊಡುಕೊಳ್ಳುವಿಕೆಯೋ?ಭಯವೂ?ಇಲ್ಲವಾದರೆ ಮುಸ್ಲೀಂರ ಮೇಲಿನ ನಿರ್ಲಕ್ಷ್ಯವೋ? ಎಂದು ಪ್ರಶ್ನಿಸಿದ್ದಾರೆ.