ಬೆಂಗಳೂರು: ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ಶುರುವಾಗಿದ್ದು, ಮಳೆಯ ಕಾರಣದಿಂದ ನೆನ್ನೆ(17.10.2024) ನಡೆಯಬೇಕಿದ್ದ ಪಂದ್ಯವೂ ರದ್ದಾಗಿತ್ತು. 3 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ಎರಡನೆ ದಿನವಾದ ಇಂದು 46 ರನ್ನುಗಳಿಗೆ ರೋಹಿತ್ ಪಡೆಯು ಆಲ್‌ಔಟ್ ಆಗಿದೆ ಎನ್ನಲಾಗಿದೆ.
ಧಾರಾಕಾರವಾಗಿ ಮಳೆಯಾಗಿರುವ ಕಾರಣ ಇಂದೂ ಮೋಡ ಮುಸುಕಿದ ವಾತವರಣದಲ್ಲಿ ಆಟ ಪ್ರಾರಂಭವಾಗಿ ಕೇವಲ 31.2 ಓವರ್‌ಗಳಲ್ಲಿ ಆಲ್‌ಔಟ್ ಆಗುವುದರ ಮೂಲಕ ಮುಗಿಸಿದ್ದಾರೆ. ಇದು ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಅತಿ ಚಿಕ್ಕ ಮೊತ್ತಕ್ಕೆ ಔಟ್ ಆಗಿರುವುದು ಎನ್ನಲಾಗಿದ್ದು, ತಮ್ಮ ತವರಿನಲ್ಲಿ ನಡೆದ ಅತ್ಯಂತ ಚಿಕ್ಕ ಮೊತ್ತದ ಆಟ ಎನ್ನಲಾಗಿದೆ.
ಮಳೆ ಕಾರಣದಿಂದ ವಾತಾವರಣವೂ ಮೋಡ ಕವಿದಿತ್ತು.ಆ ಸಮಯದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಾರಣಕ್ಕಾಗಿ ಈಗಾಗಿದೆ ಎಂದು ತಿಳಿದುಬಂದಿದೆ.