ಬೆಂಗಳೂರು:ಕೇಂದ್ರ ಸಚಿವರಾದ ಕುಮಾರಸ್ವಾಮಿ ವಿರುದ್ದ ಬೆಂಗಳೂರಿನ ಸಂಜಯ್ ನಗರದ ಪೊಲೀಸ್ ಠಾಣೆಯಲ್ಲಿ ಎಡಿಜಿಪಿ ಚಂದ್ರಶೇಖರ್ ಎಂಬುವವರು ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಎಡಿಜಿಪಿ ಚಂದ್ರಶೇಖರ್ ಕೊಟ್ಟಿರುವ ಕಂಪ್ಲೇಂಟ್ ಆಧಾರದ ಮೇಲೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ , ನಿಖಿಲ್ ಕುಮಾರಸ್ವಾಮಿ,ಮತ್ತು ಸುರೇಶ್ ಬಾಬು ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಕೇಂದ್ರಸಚಿವ ಹೆಚ್.ಡಿ,ಕುಮಾರಸ್ವಾಮಿ ಮತ್ತು ಇತರರಿಂದ ನನಗೆ ತೊಂದರೆ ಕೊಡುವುದಾಗಿ ವಾರ್ನಿಂಗ್ ನೀಡಿ ಬೆದರಿಕೆಯನ್ನು ಹಾಕಿದ್ದಾರೆಂಬ ಆರೋಪದ ಮೇರೆಗೆ ಕುಮಾರಸ್ವಾಮಿ ಮತ್ತು ಇತರರ ವಿರುದ್ದ ಎಡಿಜಿಪಿ ಚಂದ್ರಶೇಖರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.