ಈಗಿನ ಜನರೇಷನ್‌ನಲ್ಲಿ ಎಲ್ಲಾ ವಯೋಮಾನದವರಲ್ಲಿಯೂ ಕಂಡುಬರುವಂತಹ ಸಾಮಾನ್ಯವಾದ ಸಮಸ್ಯೆಯೆಂದರೆ ತಲೆಹೊಟ್ಟು ಸಮಸ್ಯೆ.ಈ ತಲೆಹೊಟ್ಟು ಸಮಸ್ಯೆ ಬಂದರೆ ತಲೆ ಕೆರೆಯುವುದು, ಕೂದಲು ಶುಷ್ಕವಾಗುವುದು, ಕೂದಲು ಉದುರುವುದು, ಮುಂತಾದ ಸಮಸ್ಯೆಗಳನ್ನು ತನ್ನ ಜೊತೆಯಲ್ಲಿಯೇ ತರುತ್ತದೆ. ಈ ತಲೆಹೊಟ್ಟಿಗೆ ಕಾರಣವೆನೆಂದು ಯೋಚಿಸುತ್ತಾ ಹೋದರೆ ಸರಿಯಾಗಿ ಕೂದಲನ್ನು ಸರಿಯಾಗಿ ಪೋಷಣೆ ಮಾಡದಿರುವುದು ಮೊದಲಿಗೆ ತಿಳಿಯುವ ಕಾರಣವಾಗಿರುತ್ತದೆ.
ಕೂದಲು ಚೆನ್ನಾಗಿ ಬೆಳೆಯಲಿ ಎಂದು ತಲೆತುಂಬಾ ಎಣ್ಣೆಯನ್ನಿಟ್ಟುಕೊಂಡು ಕೂದಲನ್ನು ಸರಿಯಾಗಿ ತೊಳೆಯದೇ ಹಾಗೇ ಬಿಟ್ಟರೆ ಡ್ಯಾಂಡ್ರಪ್ ಬರುತ್ತದೆ. ಮತ್ತು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶದ ಕೊರತೆಯಿಂದಲೂ ಈ ಸಮಸ್ಯೆ ಉಲ್ಬಣಿಸುತ್ತದೆ.
ತಲೆಹೊಟ್ಟು ನಿವಾರಣೆಯ ಶಾಂಪೂಗಳು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಪ್ರಾಡಕ್ಟ್‌ಗಳು ಬಂದರೂ ಅದರಿಂದ ನಿವಾರಣೆಯನ್ನು ಪಡೆದವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಎಂದೇಳಬಹುದು.
ಹೆಚ್ಚು ಹಣವನ್ನು ವೆಚ್ಚಮಾಡದೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ಹೇಗೆ ಕಡಿಮೆ ಮಾಡಿಕೊಳ್ಳಬಹುದೆಂಬುದನ್ನ ತಿಳಿಯೋಣ.
ಮೆಂತ್ಯ
ಮೆಂತ್ಯವನ್ನು ರಾತ್ರಿಯಿಡೀ ನೆನಸಿ ಬೆಳಗ್ಗೆ ರುಬ್ಬಿ ತಲೆಗೆ ಹಚ್ಚಿ 1 ಗಂಟೆಯ ಬಳಿಕ ತೊಳೆಯುವುದರಿಂದ ಕ್ರಮೇಣ ಕಮ್ಮಿಯಾಗುತ್ತದೆ.
ಕೊಬ್ಬರಿ ಎಣ್ಣೆ ಮತ್ತು ನಿಂಬೆ
ಕೊಬ್ಬರಿ ಎಣ್ಣೆಯ ಜೊತೆಗೆ ನಿಂಬೆರಸವನ್ನು ಮಿಕ್ಸ್ ಮಾಡಿ ಹಚ್ಚಿ ತೊಳೆದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಮೊಸರು
ಮೊಸರನ್ನ ತಲೆಗಾದ್ರೂಹಚ್ಚಿಕೊಳ್ಳಬಹುದು ಅಥವಾ ಹೊಟ್ಟೆಗಾದ್ರೂ ಸೇರಿಸಬಹುದು ಅಂದ್ರೆ ಮಾಸ್ಕ್ ರೀತಿ ಹೇರ್ ಪ್ಯಾಕ್ ಆಗಿ ಬಳಸಬಹುದು, ಇಲ್ಲವಾದರೆ ನಾವು ಸೇವಿಸುವ ಆಹಾರದಲ್ಲಿ ಇದನ್ನು ಸೇರಿಸಿಕೊಂಡು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಆಲೋವೆರಾ
ಆಲೋವೆರಾ ಚರ್ಮ ಮತ್ತು ಕೂದಲ ಪೋಷಣೆಗೆ ತುಂಬಾ ಉಪಯುಕ್ತವಾಗಿದೆ. ಆಲೋವೆರಾವನ್ನು ರುಬ್ಬಿ ತಲೆಗೆ ಹಚ್ಚಿ ಮಸಾಜ್ ಮಾಡಿ ಅರ್ಥಗಂಟೆ ಬಳಿಕ ಮೈಲ್ಡ್ ಶಾಂಪೂ ಹಾಕಿ ತೊಳೆಯಬೇಕು.
ದಾಸವಾಳ
ಈ ದಾಸವಾಳದ ಎಲೆ ಮತ್ತು ಹೂವು ಯಾವುದಾದರೊಂದನ್ನು ಪೇಸ್ಟ್ ಮಾಡಿ ಅದಕ್ಕೆ ಆಲೋವೆರಾ ಜೆಲ್, ಆಲಿವ್ ಆಯಿಲ್, ಮಿಕ್ಸ್ ಮಾಡಿ ಹೇರ್ ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳಬಹುದು.