ಗೋಲ್ಗುಪ್ಪಾ ತಯಾರಿಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಅಂಶಗಳನ್ನು ಸೇರಿಸಲಾಗ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಕರ್ನಾಟಕ ಆಹಾರ ಗುಣಮಟ್ಟ ಇಲಾಖೆ ಗೋಲ್‌ಗುಪ್ಪಾ ಮಾರಾಟಗಾರರ ಮೇಲೆ ನಿಗಾವಹಿಸಿ ಕ್ರಮವನ್ನು ಕೈಗೊಳ್ಳಲಿದ್ದಾರೆ.
ಗೋಲ್‌ಗುಪ್ಪಾದ ರುಚಿಯನ್ನು ಹೆಚ್ಚಿಸಲುಹಾರ್ಪಿಕ್ ಮತ್ತು ಯೂರಿಯಾವನ್ನು ಬಳಸಲಾಗ್ತಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಗೋಲ್‌ಗುಪ್ಪಾವನ್ನು ಬ್ಯಾನ್ ಮಾಡಲು ಚಿಂತನೆಯನ್ನು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಎರಡು ಗೋಲ್‌ಗುಪ್ಪಾ ತಯಾರಿಕಾ ಸ್ಥಳಕ್ಕೆ ಭೇಟಿ ನೀಡಿ ದಾಳಿಯನ್ನು ನಡೆಸಿದ ಇಲಾಖೆ, ಸ್ಯಾಂಪಲ್ಸ್‌ಗಳನ್ನು ಪ್ರಯೋಗಾಲಯಗಳಿಗೆ ನೀಡಲಾಗಿದ್ದು, ಅತಿ ಶೀಘ್ರದಲ್ಲೇ ವರದಿ ಬಂದ ನಂತರ ಬ್ಯಾನ್ ಮಾಡುವ ಚಿಂತನೆಯನ್ನು ನಡೆಸಲಾಗುತ್ತದೆ ಎನ್ನಲಾಗಿದೆ.
ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿಗೋಲ್‌ಗುಪ್ಪಾ ತಯಾರಿಸುವ ಹಿಟ್ಟನ್ನು ಕಾಲಿನಲ್ಲಿ ತುಳಿಯುವ ವಿಡೀಯೋ ವೈರಲ್ ಆಗಿರುವುದರಿಂದ ಅವರಿಬ್ಬರನ್ನು ಬಂಧಿಸಿಲಾಯಿತು. ಗೋಲ್‌ಗುಪ್ಪಾ ಹಿಟ್ಟಿನ ರುಚಿಯನ್ನು ಹೆಚ್ಚಿಸಲು ನೀರಿಗೆ ಯೂರಿಯಾ ಮತ್ತು ಹಾರ್ಪಿಕ್‌ನ್ನು ಬಳಸುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಗೋಲ್‌ಗುಪ್ಪಾ ತಯಾರಿಕಾ ಸ್ಥಳದಲ್ಲಿರುವ ವಸ್ತುಗಳನ್ನೆಲ್ಲಾ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.