ಬೆಂಗಳೂರು: ಇನ್ನೇನು ಕೆಲವು ದಿನಗಳ ನಂತರ ಗೌರಿ ಗಣೇಶ ಹಬ್ಬ ಬರುತ್ತದೆ.ಈ ಹಬ್ಬಕ್ಕೆ ಪಿಒಪಿ ಗಣೇಶನ ಮೂರ್ತಿಗಳನ್ನು ಬಳಸುವುದಿಲ್ಲ ಎಂಬ ಮುಚ್ಚಳಿಕೆಯ ಪತ್ರವನ್ನು ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆಯವರು ಹೇಳಿದ್ದಾರೆ.
ವಿಕಾಸ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಶ್ರದ್ದಾಭಕ್ತಿಗಳಿಂದ ಗಣೇಶ ಹಬ್ಬವನ್ನು ಆಚರಿಸುತ್ತೇವೆ. ಇದರಿಂದ ಜಲಚರಗಳಿಗೆ, ಜಲಮೂಲಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಈ ಕಾರಣದಿಂದ ಗಣೇಶೋತ್ಸವ ಸಮಿತಿಗಳು ಮತ್ತು ಸಾರ್ವಜನಿಕರು ಪಿಒಪಿ ಗಣಪತಿಯನ್ನು ಖರೀಧಿಸದೆ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದ ಪರಿಸರಸ್ನೇಹಿ ಮೂರ್ತಿಗಳನ್ನು ಖರೀಧಿಸಿ ಪೂಜೆ ಮಾಡಿ ನಂತರ ಮೂರ್ತಿ ವಿಸರ್ಜನೆ ಮಾಡಲು ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಲ್ಲಿ ಶೇ90% ಜನರು ಪರಿಸರಸ್ನೇಹಿ ಮೂರ್ತಿಗಳನ್ನು ಪೂಜಿಸುತ್ತಾರೆ.ಹಾಗೆಯೇ ಬೇರೆ ಜಿಲ್ಲೆಗಳಲ್ಲಿ ಯಾಕೆ ಪೂಜಿಸುವುದಿಲ್ಲವೆಂದು ಪ್ರಶ್ನೆ ಮಾಡಿದ್ದಾರೆ.
ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ ಬದಲಾಗಿ ನೀರಿನ ಜೊತೆಗೆ ವಿಷಕಾರಿ ಅಂಶಗಳನ್ನು ಸೇರಿಸುತ್ತವೆ.ಇದರಿಂದ ಜಲಚರಗಳು ಸಾಯುತ್ತವೆ. ಆದ್ದರಿಂದ ಅದಷ್ಟು ಮಣ್ಣಿನ ಮೂರ್ತಿಗಳನ್ನು ಬಳಸುವಂತೆ ಶಾಲಾ-ಕಾಲೇಜು ಮಕ್ಕಳಲ್ಲಿ ಅರಿವು ಮೂಡಿಸುವಂತೆ ಸೂಚಿಸಿದ್ದಾರೆ.
