ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗಳು ನಡೆದಿದ್ದು, ಜನಾರ್ಧನ ರೆಡ್ಡಿ ಮನೆ ಎದುರು ಫೈಯರಿಂಗ್ ನಡೆದಿರುವ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯ ಕುರಿತು ರಾಜ್ಯ ಈಜಿಪಿ ಎಂ.ಎ. ಸಲೀಂ ಅವರಿಂದ ಸಿಎಂ ಸಿದ್ದರಾಮಯ್ಯನವರು ಮಾಹಿತಿಯನ್ನು ಪಡೆದುಕೊಂಡಿದ್ದು, ಈ ಅವಘಡ ಏಕೆ ಸಂಭವಿಸಿತು, ಹೇಗೆ ಗೆ ಸಂಭವಿಸಿತು, ಘಟನೆ ಯಾಕೆ ಆಗಿದೆ? ಇದಕ್ಕೆಲ್ಲಾ ಕಾರಣ ಯಾರು ಎಂಬುದರ ಫುಲ್ ಡಿಟೇಲ್ಸ್‌ನ್ನು ಪಡೆದುಕೊಂಡಿದ್ದು, ಈ ಘಟನೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಲೀಂ ರವರಿಗೆ ಸಿಎಂ ಸಿದ್ದರಾಮಯ್ಯನವರು ಸೂಚನೆಯನ್ನು ನೀಡಿದ್ದಾರೆ.
ಈ ಗಲಾಟೆಯು ವಾಲ್ಮೀಕಿ ಪ್ರತಿಮೆಯ ಅನಾವೃಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯವರ ಮನೆಯ ಎದುರಿನಲಗಲಿ ಫೈರಿಂಗ್ ಆಗಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದು, ಬಳ್ಳಾರಿಯ ಹುಸೇನ್ ನಗರದ ರಾಜಶೇಖರ್ ಎಂಬುವವರು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
