ಹರಿಯಾಣ (16-02-2023): ಪ್ರೇಮಿಗಳ ದಿನದಂದು ಉದ್ಯಾನವನದಲ್ಲಿ ಕುಳಿತಿದ್ದ ವಿವಾಹಿತ ದಂಪತಿಗಳನ್ನು ಬೆದರಿಸಿ ಹಲ್ಲೆ ನಡೆಸಿದ ಬಜರಂಗದಳ ಕಾರ್ಯಕರ್ತರನ್ನು ಸಾರ್ವಜನಿಕರು ಅಟ್ಟಾಡಿಸಿಕೊಂಡು ಹೊಡೆದ ಘಟನೆ ಹರ್ಯಾಣದ ಫರೀದಾಬಾದ್ ನಲ್ಲಿ ಮಂಗಳವಾರ ನಡೆದಿದೆ.
ಇಂಡಿಯಾ ಟುಡೆ ಮಾಡಿರುವ ಸುದ್ದಿ ಮೂಲಗಳ ಪ್ರಕಾರ ಭಜರಂಗದಳದ ಕಾರ್ಯಕರ್ತರು ಉದ್ಯಾನವನಕ್ಕೆ ನುಗ್ಗಿ ಪ್ರೇಮಿಗಳ ದಿನ ಉದ್ಯಾನವನದಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ವಿವಾಹಿತ ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಕಾರ್ಯಕರ್ತರನ್ನು ಒದ್ದು ಓಡಿಸಿದ್ದಾರೆ.
ಬಜರಂಗದ ಕಾರ್ಯಕರ್ತರನ್ನು ಸಾರ್ವಜನಿಕರು ಅಟ್ಟಾಡಿಸಿಕೊಂಡು ಹೋಗಿ ಹೊಡೆಯುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು ದಂಪತಿಗಳು ಕಾರ್ಯಕರ್ತರ ವಿರುದ್ಧ ಲಿಖಿತ ದೂರು ನೀಡಿದ ನಂತರ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.