ನವದೆಹಲಿ: ಡೀಫ್ ಫೇಕ್ವಿಡಿಯೋ ಹಾವಳಿ ಕೇವಲಸಿನಿಮಾ ನಟರನ್ನು ಕಾಡುವುದಲ್ಲದೆ ಎಲ್ಲರನ್ನೂ ಬೆಂಬಿಡದೆ ಕಾಡುತ್ತಿದೆ. ರಾಜ್ಯಸಭಾ ಸಂಸದೆ ಸುಧಾಮೂರ್ತಿಯವರಿಗೂ ಕಾಡುತ್ತಿದೆ. ಸುಧಾಮೂರ್ತಿಯವರು ಶಿಫಾರಸ್ಸು ಮಾಡಿದ ಕಂಪೆನಿಗಳಿಗೆ ಹೂಡಿಕೆ ಮಾಡುವಂತೆ ಕೇಳಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದನ್ನು ಗಮನಿಸಿದ ಅವರು ಇದುನಕಲಿ ವೀಡಿಯೋ ಇದು ಎಐ ಮೂಲಕ ಸೃಷ್ಟಿಸಿದ ವೀಡಿಯೋ ಇದನ್ನು ನಂಬಬೇಡಿ ಎಂದು ಹೇಳಿದ್ದಾರೆ.
ಹೂಡಿಕೆ ಮಾಡುವುದರ ಬಗ್ಗೆ ನಾನು ಎಲ್ಲಿಯೂ ಮಾತನಾಡಿಲ್ಲ. ಅದರ ಬಗ್ಗೆ ನನಗೆ ಮಾಹಿತಿಯೂ ಇಲ್ಲ. ಈ ಹೂಡಿಕೆ ವಿಷಯದಲ್ಲಿ ನನ್ನ ಮುಖವನ್ನು ಬಳಸಬೇಡಿ ಎಂದು ಕೇಳಿಕೊಂಡಿದ್ದಾರೆ.
ಯಾರೇ ಆಗಲೀ, ಹೂಡಿಕೆ ಮಾಡುವ ಮೊದಲು ಕಂಪೆನಿಗಳಿಗೆ ಹೋಗಿ ಪರಿಶೀಲಿಸಬೇಕು ಬ್ಯಾಂಕುಗಳೊಂದಿಗೆ ಸಮಾಲೋಚನೆ ನಡೆಸಿ ಮುಂದುವರೆಯಬೇಕು. ಸಮಾಜದಲ್ಲಿ ಗುರುತಿಸಿಕೊಂಡವರ ಮುಖಗಳನ್ನು ಉಪಯೋಗಿಸಿಕೊಂಡು ಡೀಪ್ ಫೇಕ್ ವಿಡಿಯೋ ಗಳನ್ನು ನೋಡಿ ಹೂಡಿಕೆ ಮಾಡಲು ಮುಂದಾಗುವುದು ಸರಿಯಲ್ಲ ಎಂದಿದ್ದಾರೆ.
