ಬೆಂಗಳೂರು : ಕನ್ನಡ ಚಲನಚಿತ್ರಗಳ ನಟ, ನಿರ್ದೆಶಕ ಗುರುಪ್ರಸಾದ್‌ ನಗರದ ಮಾದನಾಯಕನನ ಹಳ್ಳಿ ಅಪಾರ್ಟ್‌ಮೆಂಟೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ.ಈ ವಿಚಾರ ತಿಳಿದ ಡಿಸಿಎಂಡಿಕೆಶಿವಕುಮಾರ್‌ ತಮ್ಮ ಟ್ವೀಟ್ಟರ್‌ ಖಾತೆಯಲ್ಲಿ ಬರೆಯುವುದರ ಮೂಲಕ ಸಂತಾಪವನ್ನು ಸೂಚಿಸಿದ್ದು, ನಿಮ್ಮ ನಿಧನದ ಸುದ್ದಿಯ ವಿಚಾರ ತಿಳಿದು ಮನಸ್ಸಿಗೆ ನೋವುಂಟಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ.

ಸೃಜನಶೀಲ ನಿರ್ದೇಶಕರು ಹಾಗೂ ಕನಕಪುರ ಮೂಲದವರೇ ಆದ ಶ್ರೀ ಗುರುಪ್ರಸಾದ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಗಿದೆ. ಬೆಳ್ಳಿತೆರೆ ಹಾಗೂ ಕಿರುತೆರೆಗೆ ತಮ್ಮದೇ ಶೈಲಿಯ ಕೊಡುಗೆ ನೀಡಿದ ಗುರುಪ್ರಸಾದ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರು ಹಾಗೂ ಆತ್ಮೀಯರ ನೋವಿನಲ್ಲಿ ನಾನೂ ಕೂಡ ಭಾಗಿ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.‌

Leave a Reply

Your email address will not be published. Required fields are marked *