ಬೆಂಗಳೂರು: ಸೌಜನ್ಯಾ ಪ್ರಕರಣ ವಿಚಾರದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿರುವ ಕಾರಣ ಯ್ಯೂಟೂಬರ್‌ ಸಮೀರ್‌ ಮೇಲೆ ದೂರು ದಾಖಲಾಗಿದ್ದು, ಯಾವ ಸಮಯದಲ್ಲಿ ಬೇಕಾದರೂ ಅರೆಸ್ಟ್‌ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಧರ್ಮಸ್ಥಳದ ಪೊಲೀಸರು ಸಮೀರ್‌ ನನ್ನ ಹುಡುಕಿಕೊಂಡು ಬಂದಿದ್ದು, ಸರಿಯಾದ ವಿಳಾಸ ಸಿಗದೆ ಹುಡುಕಾಟ ನಡೆಸಿದ್ದಾರೆ. ಬೆಂಗಳೂರಿನ  ಬನ್ನೇರುಘಟ್ಟದ ಸಮೀಪ ಸಮೀರ್‌ ಬಾಡಿಗೆ ಮನೆಯ ಹತ್ತಿರ ಪೊಲೀಸರು ಆಗಮಿಸಿ ಮನೆಯ ಸುತ್ತ ಸುತ್ತುವರೆದಿದ್ದಾರೆ.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿರುವ ಸಮೀರ್‌ನನ್ನು ಅರೆಸ್ಟ್‌ ಮಾಡಿ ಎಂದು ಆತನ ವಿರುದ್ದ ಹಿಂದೂ ಸಂಘಟನೆಗಳು ದೂರನ್ನು ನೀಡಿದ್ದವು. ಅದಲ್ಲದೆ ಸಮೀರ್‌ನನ್ನು ಅರೆಸ್ಟ್‌ ಮಾಡುವಂತೆ ಸಾಮಾಜಿಕ ಜಾಲಾತಾಣಗಳಲ್ಲಿ ನೆಟ್ಟಿಗರು ಅಗ್ರಹ ಮಾಡುತ್ತಿದ್ದರು ಎನ್ನಲಾಗಿದೆ.

ಹಿಂದೂ ಧರ್ಮ ಮತ್ತು ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬಾರದು. ಆದರೂ ಎಈ ವಿಡಿಯೋ ಮೂಲಕ ಅವಹೇಳನ ಮಾಡಿದ್ದರೂ ಸಮೀರ್‌ನನ್ನು ಅರೆಸ್ಟ್‌  ಮಾಡಿ ಕಠಿಣ ಕ್ರಮಗಳನ್ನು ಜರುಗಿಸಬೇಕೆಂದು ಹಿಂದೂ ಸಂಘನೆಗಳು ಒತ್ತಾಯ ಹೆಚ್ಚಾಗುತ್ತಿರುವ ಕಾರಣ ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *