ಬೆಳಗಾವಿ: ಸತೀಶ್‌ ಜಾರಕಿಹೊಳಿ ಮನೆಯಲ್ಲಿ ಆಯೋಜಿಸಿದ್ದ ರಾತ್ರಿ ಡಿನ್ನರ್‌ ಮೀಟಿಂಗ್‌ ಬಗ್ಗೆ ಪ್ರಶ್ನೆ ಕೇಳಿದಾಗ ಊಟಕ್ಕೆ ಆಹ್ವಾನ ಬಂದರೆ ಬೇಡ ಎನ್ನುವುದಕ್ಕೆ ಆಗುತ್ತದಾ ಎಂದು ಉತ್ತರಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊಟ ಮಾಡುವುದರಲ್ಲಿ ತಪ್ಪಿಲ್ಲ. ಊಟಕ್ಕೆ ಕರೆದರೆ ಬೇಡ ಎನ್ನುವುದಕ್ಕೆ ಆಗುತ್ತದಾ? ಏನೋ ಹೊರಗಡೆಯಿಂದ ಬಂದಿರ್ತಾರೆ. ಸ್ಥಳೀಯರು ಡಿನ್ನರ್‌ಗೆ ಕರೆದರೆ ತಪ್ಪೇನು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಪ್ರತತಿಕ್ರಿಯೆ ನೀಡಿದ್ದಾರೆ.

ವಿಧಾನಸಭೆಯ ಸದನದಲ್ಲಿಎಲ್ಲಾ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ. ನಿನ್ನೆನಡೆದ ಕ್ಯಾಬಿನೆಟ್​ ಮೀಟಿಂಗ್‌ನಲ್ಲಿ ಉತ್ತರ ಕರ್ನಾಟಕ ವಿಚಾರದ ಬಗ್ಗೆ ಚರ್ಚೆಗಳಾಗಿವೆ. ಸದನದಲ್ಲಿ ಎಲ್ಲಾ ವಿಷಯಗಳನ್ನು ಚರ್ಚೆ ನಡೆಸಲಿದ್ದೆವೆ.ಸದನದಲ್ಲಿ ಬಿಜೆಪಿಯವರು ನಮ್ಮ ಮೇಲೆ ಆಪಾದನೆ ಮಾಡಲು ಯಾವ ವಿಚಾರವು ಇರಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *