ಬೆಳಗಾವಿ: ನಮ್ಮ ಸ್ನೇಹಿತರು, ಸ್ಥಳೀಯರು, ನಮ್ಮ ಕ್ಷೇತ್ರದವರು ಪ್ರೀತಿಯಿಂದ ಮನೆಗೆ ಕರೆದು ಊಟ ಹಾಕಿದರೆ ಬೇಡ ಎನ್ನಲು ಆಗುತ್ತದೆಯಾ? ಅವರು ನನ್ನನ್ನು ಅಷ್ಟು ಪ್ರೀತಿಯಿಂದ ಕರೆಯುತ್ತಿರುವಾಗ ಆಗಲ್ಲ ಎನ್ನುವುದಿಲ್ಲ. ಒಂದೊಂದು ದಿನ ಒಬ್ಬೊಬ್ಬರ ಮನೆಗೆ ಹೋಗುತ್ತೇನೆ.ಇದು ರಾಜಕೀಯದ ಯಾವ ಔತಣಕೂಟವೂ ಅಲ್ಲ ಏನೂ ಅಲ್ಲ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯ ಸರ್ಕಿಟ್ ಹೌಸ್‌ನ ಬಳಿ ಮಾತನಾಡಿದ ಅವರು, ಮಾಧ್ಯಮದವರು ಗುರುವಾರ ರಾತ್ರಿ ಶಾಸಕರ ಜೊತೆ ಔತಣಕೂಟದಲ್ಲಿ ಭಾಗಿಯಾಗಿದ್ರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನನ್ನ ಕ್ಷೇತ್ರದ ಜನರು ಕರೆದರೆ ಬರಲ್ಲ ಎಂದು ಹೇಳಲಾಗುವುದಿಲ್ಲ. ನನ್ನ ಕ್ಷೇತ್ರದ ಹುಡುಗನೊಬ್ಬ ಇಲ್ಲಿ ಕೆಲಸವನ್ನು ಮಾಡುತ್ತಿದ್ದಾನೆ ಅವನ ಮನೆಯಿಂದ ಇವತ್ತು ಊಟ ಮಾಡಿದೆ. ಅವರು ಪ್ರೀತಿಯಿಂದ ಕರೆದಾಗ ಬೇಡವೆನ್ನಲು ಸಾದ್ಯವಿಲ್ಲ.ನಾಳೆ ನಾಡಿದ್ದು, ಆಸೀಪ್ ಸೇಠ್ ಎಂಬುವವರು ಊಟಕ್ಕ ಕರೆದಿದ್ದಾರೆ ಅಲ್ಲಿಗೂ ಹೋಗುತ್ತೇನೆ.
ಅದೇ ರೀತಿಯಲ್ಲಿಯೇ ಬೆಳಗಾವಿ ಜಿಲ್ಲೆಯ ಮಾಜಿ ಅಧ್ಯಕ್ಷರಾದ ದೊಡ್ಡಣ್ಣನವರು ನನ್ನ ಸ್ನೇಹಿತರೂ ಹೌದು, ಅವರು ನನ್ನನ್ನು ತುಂಬಾ ವರ್ಷಗಳಿಂದ ಕರೆಯುತ್ತಿದ್ದರು. ನಮ್ಮ ಪಕ್ಷದವರನ್ನು ಮರೆಯಲುಆಗುತ್ತದೆಯೇ ? ಆದ್ದರಿಂದ ನಾನು ಮತ್ತು ಒಂದಷ್ಟು ಕಾರ್ಯಕರ್ತರು ಊಟಕ್ಕೆ ಹೋಗಿದ್ದೇವು. ಅದು ಬಿಟ್ಟು ಇದು ಉದ್ದೇಶ ಪೂರ್ವಕವಾದ ಮತ್ತು ಯಾವುದೇ ರಾಜಕೀಯ ಔತಣ ಕೂಟ ಅಲ್ಲವೆಂದು ಹೇಳಿದ್ದಾರೆ.
