ಬೆಂಗಳೂರು: ಶಾಸಕ ಮುನಿರತ್ನರವರ ಜಾತಿ ನಿಂದನೆ, ಮತ್ತು ಕೊಲೆ ಪ್ರಕರಣದ ಕುರಿತು ಪಕ್ಷದ ಶಾಸಕರು, ರಾಜಕೀಯ ನಾಯಕರು,ಸ್ವಾಮೀಜಿಗಳು, ಹಿರಿಯರು, ನಾಗರಿಕರೆಲ್ಲರೂ ಮಾತನಾಡಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಅಮೆರಿಕ ಪ್ರವಾಸದಿಂದ ವಾಪಾಸ್ಸಾದ ನಂತರ ಸುದ್ದಿಮಿತ್ರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವಾಗಿದೆ. ಶಾಸಕ ಮುನಿರತ್ನರವರ ಪ್ರಕರಣದ ಬಗ್ಗೆ ಮಾತನಾಡಲು ದೊಡ್ಡ ದೊಡ್ಡ ನಾಯಕರಿದ್ದಾರೆ ಅವರೇ ಈ ಪ್ರಕರಣದ ಬಗ್ಗೆ ಮಾತನಾಡಬೇಕು. ಮುನಿರತ್ನ ಮಾಡಿರುವುದು ಸರಿಯೋ ತಪ್ಪೋ? ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ತಿಳಿಹೇಳಬೇಕು.ಅವರು ಮಾಡಿದ್ದು ಸರಿಯೆಂದರೆ ಸರಿ, ತಪ್ಪೆಂದರೆ ತಪ್ಪು ಎನ್ನಬೇಕು ಎಂದಿದ್ದಾರೆ.