ಅಹಮದಾಬಾದ್:‌ ಸಂಬಂಧಿ ಮದುವೆ ಕಾರ್ಯಕ್ರಮದಲ್ಲಿ ನೋಟುಗಳನ್ನು ತೂರಿದ ವ್ಯಕ್ತಿ; ನೋಟಿನ ಸುರಿಮಳೆ ಕಂಡು ಹಣಕ್ಕಾಗಿ ಮುಗಿಬಿದ್ದ ಜನ. ಈ ಘಟನೆಯು ಗುಜರಾತಿನಲ್ಲಿ ನಡೆದಿದೆ.

ಇತ್ತೀಚೆಗಿನ ದಿನಗಳಲ್ಲಿ ಕಾರಾಣಾಂತರಗಳಿಂದ ಹಣದ ಸುರಿಮಳೆ(ಹಣವನ್ನುತೂರುವುದು) ಟ್ರೆಂಡ್‌ ಆಗಿಬಿಟ್ಟಿದೆ. ಇತ್ತೀಚೆಗೆ ಬೆಂಗಳೂರಿನ ಮಾರ್ಕೆಟ್‌ ಫ್ಲೈ ಓವರ್‌ ಮೇಲಿನಿಂದ ಹಣ ಸುರಿದ ಘಟನೆ ಸುದ್ದಿಯಾಗಿತ್ತು. ಇದೇ ರೀತಿ ನಿನ್ನೆ ಮೆಹಸಾನ ಜಿಲ್ಲೆಯ ಕೇಕ್ರಿ ತಾಲ್ಲೂಕಿನ ಅಗೋಲ್‌ ಎಂಬ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಂಬಂಧಿ ಮದುವೆ ಸಮಾರಂಭದಲ್ಲಿ ತಮ್ಮ ಮನೆಯ ಮೇಲಿಂದ 100 ರೂಪಾಯಿಯ ನೋಟುಗಳು ಮತ್ತು 500 ರೂಪಾಯಿ ನೋಟುಗಳನ್ನು ಎಸೆದಿರುವ ಘಟನೆ ನಡೆದಿದೆ.

ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಮತ್ತು ಸುತ್ತಮುತ್ತಲಿನ ಜನರು ನೋಟುಗಳನ್ನು ಬಾಚಿಕೊಳ್ಳಲು ಮುಗಿಬಿದ್ದಿರುವ ವಿಡಿಯೋ ವೈರಲ್‌ ಅಗಿದ್ದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ.

https://twitter.com/AhmedKhabeer_/status/1627135293576081408

ಈ ರೀತಿ ನೋಟುಗಳನ್ನು ಗಾಳಿಯಲ್ಲಿ ತೂರಿಬಿಡುವುದು ಸಾಮಾನ್ಯವಾಗಿ ಪಬ್ಬು, ಕ್ಲಬ್ಬು, ಬಾರ್‌ಗಳಲ್ಲಿ ನೋಡಬಹುದು, ಇದೇ ರೀತಿ ಬೆಂಗಳೂರು ನಗರದ ಕೆ.ಆರ್.ಮಾರುಕಟ್ಟೆಯ ಪ್ಲೈಓವರ್‌ ಮೇಲೆ 10ರೂಪಾಯಿ ನೋಟುಗಳನ್ನು ಎಸೆದಿರುವುದು ನಡೆದಿದ್ದು, ನೋಟು ಎಸೆದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂಬುದು ತಿಳಿದುಬಂದಿತ್ತು. ಮತ್ತು ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿಯೂ ಈ ಘಟನೆ ನಡೆದಿತ್ತು ಎನ್ನಲಾಗಿದ್ದು ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಕರೀಂ ಯಾದವ್‌ ನೋಟುಗಳನ್ನು ತೂರಿದ ವ್ಯಕ್ತಿ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *