ಬೆಂಗಳೂರು:ಕಾಂಗ್ರೆಸ್ ಪಕ್ಷ ಶಾಸಕರನ್ನು ಬಿಜೆಪಿಯವರು 50 ಕೋಟಿ ಆಫರ್ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಗಂಭೀರ ಆರೋಪವನ್ನು ಮಾಡಿದ್ದಾರೆ.ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಅವರೇನು ಕುದುರೆನಾ, ಕತ್ತೆನಾ, ಅಥವಾ ದನನಾ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಯಾರು ಯಾರನ್ನು ಖರೀದಿಸಲು ಕೋಟಿ ಕೋಟಿ ಆಫರ್ ನೀಡಿದ್ದರು? ಸಾಕ್ಷಿಗಳಿದ್ದರೆ ದೂರನ್ನು ದಾಖಲಿಸಿ ಸತ್ಯವನ್ನು ಸಾಬೀತು ಮಾಡಲಿ, ಇದು ಸಿಎಂ ಜವಾಬ್ದಾರಿ ಇದನ್ನು ಬಿಟ್ಟು ಸುಖಾ ಸುಮ್ಮನೆ ಆರೋಪಗಳನ್ನು ಮಾಡುವುದು ಎಷ್ಟು ಸರಿ? ಬಿಜೆಪಿ ಪಕ್ಷ ಬಗ್ಗೆ ಜನರ ಮನಸ್ಸಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸಲು ಷಡ್ಯಂತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ಸಿನವರು ಸುಳ್ಳು ಹೇಳಿಕೆ ನೀಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಳ್ಳು ಹೇಳದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ.ಸುಳ್ಳಿನಿಂದಲೇ ಇವರ ಬದುಕು ನಡೆಯುತ್ತಿದೆ ಮತ್ತು ಬೇಳೆ ಬೇಯುತ್ತದೆ.ಸುಳ್ಳಿನಿಂದ ಶುರುವಾದ ದಿನಚರಿ ಸುಳ್ಳಿನಿಂದಲೇ ಅಂತ್ಯವಾಗುತ್ತದೆ.ನಿಮ್ಮ ಹತ್ತಿರವೇ 137 ಶಾಸಕರು ಇದ್ದಾರೆ ಅವರನನು ಅಲುಗಾಡಿಸಲು ಸಾದ್ಯವಿಲ್ಲ. ನಿಮ್ಮ ಪಕ್ಷದವರೇ ನಿಮ್ಮನ್ನು ನಂಬುತ್ತಿಲ್ಲವೆಂದು ಸಿಟಿ ರವಿ ಕಿಡಿಕಾರಿದ್ದಾರೆ.