ಬೆಂಗಳೂರು: ಚಲವಾದಿ ನಾರಾಯಣಸ್ವಾಮಿಯವರೇ, ಶಾಲೆಯ ಬದಲು ಬಿರಿಯಾನಿ ಹೋಟೆಲ್‌ ನಿರ್ಮಿಸಿದ್ದು ಉಲ್ಲಂಘನೆ ಅಲ್ಲವೇ? ಎಂದು ಕಾಂಗ್ರೆಸ್‌ ತನ್ನ ಎಕ್ಸ್‌ ಖಾತೆಯಲ್ಲಿ ತಿರುಗೇಟನ್ನು ನೀಡಿದೆ.

ಚಲವಾದಿ ನಾರಾಯಣಸ್ವಾಮಿಯವರೇ, ಸಿಎ ನಿವೇಶನವನ್ನು ಯಾರ್‌ ಬೇಕಿದ್ದರೂ ಪಡೆಯಬಹುದು ಆ ನಿವೇಶನ ಇರುವುದು ಕೈಗಾರಿಕೆ ನಡೆಸುವುದಕ್ಕಲ್ಲ, ನಾಗರೀಕ ಸೌಲಭ್ಯ ನಿರ್ಮಿಸಲು ಸೀಮಿತ, ಸಿದ್ದಾರ್ಥ ವಿಹಾರ ಟ್ರಸ್ಟ್‌ ಕೂಡಾ ಎಲ್ಲಾ ನಿಯಮಗಳನ್ನು ಪಾಲಿಸಿ, ಅರ್ಹತೆಯಿಂದಲೇಪಡೆದುಕೊಂಡಿದೆ.

ಆದರೆ

ನಾರಾಯಣಸ್ವಾಮಿ ಅವರು ಕರ್ನಾಟಕ ಗೃಹಮಂಡಳಿಯ ನಿರ್ದೇಶಕರಾಗಿದ್ದಾಗ ಶಾಲೆ ನಿರ್ಮಿಸುತ್ತೇನೆ ಎಂದು ತಮ್ಮ ಟ್ರಸ್ಟ್‌ಗೆ ನಿವೇಶನ ಮಂಜೂರು ಮಾಡಿದಿಕೊಂಡಿದ್ದು ಅಧಿಕಾರ ದುರ್ಬಳಕೆ ಅಲ್ಲವೇ?

ಶಾಲೆಯ ಬದಲು ಬಿರಿಯಾನಿ ಹೋಟೆಲ್‌ ನಿರ್ಮಿಸಿದ್ದು ಉಲ್ಲಂಘನೆ ಅಲ್ಲವೇ? ಈ ಬಗ್ಗೆ ನಾರಾಯಣಸ್ವಾಮಿಯವರು ಮೌನಕ್ಕೆ ಜಾರಿರುವುದು ಏಕೆ?

ಉಂಡ ಮನೆಗಳ ಹಿರಿಯುವ ನಾರಾಯಣಸ್ವಾಮಿಯವರು ತಮ್ಮ ನಿವೇಶನ ಅಕ್ರಮದ ಬಗ್ಗೆ ಮಾತಾಡಲಿ.

ರಾಜ್ಯಪಾಲರು ವಿಧಾನಪರಿಷತ್‌  ಸ್ಥಾನದಿಂದ ನಾರಾಯಣಸ್ವಾಮಿಯವರನ್ನು ವಜಾ ಮಾಡಲಿ ಎಂದು. ತಿರುಗೇಟನ್ನು ನೀಡಿರುವುದ ಕಂಡುಬಂದಿದೆ.

Leave a Reply

Your email address will not be published. Required fields are marked *