ಬೆಂಗಳೂರು: ದೇಶದ ಪ್ರಧಾನಿಯ ಬಗ್ಗೆ ಹೇಳಿಕೆ ನೀಡುವುದು ಪ್ರಜಾಪ್ರಭುತ್ವಕ್ಕೆ ಬಗೆಯುವ ದ್ರೋಹ. ಕಾಂಗ್ರೆಸ್ ಪಕ್ಷದ ನಾಯಕರಿಗೆ ನ್ಯಾಯಯುತವಾಗಿ ಚುನಾವಣೆ ನಡೆಸಲು ಆಗದ ಕಾಂಗ್ರೆಸ್ ದೇಶದಲ್ಲಿ ಅರಾಜಕತೆಯನ್ನು ಮೂಡಿಸಲು ಯತ್ನಿಸುತ್ತಿರುವುದು ಸುಳ್ಳಲ್ಲಎಂದು. ಬಿಜೆಪಿ ಘಟಕವೂ ತಿರುಗೇಟನ್ನು ನೀಡಿದೆ.
ಆ ದಿನ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ರಾಜಭವನಕ್ಕೆ ನುಗ್ಗುವ ಬೆದರಿಕೆ ಹಾಕಿದ್ದಲ್ಲದೆ, ಇಂದು ರೋಣ ಶಾಸಕ ಜಿಎಸ್ ಪಾಟೀಲ್ ಬಾಂಗ್ಲಾ ದೇಶದಲ್ಲಿ ಪ್ರಧಾನಿ ಮನೆಗೆ ನುಗ್ಗಿರುವ ಹಾಗೆ ನಮ್ಮ ದೇಶದ ಪ್ರಧಾನಿಯ ಮನೆಗೆ ನುಗ್ಗುವ ದಿನ ದೂರವಿಲ್ಲವೆಂದು ಕಾಂಗ್ರೆಸ್ಸಿಗರು ತಮ್ಮ ಎಲುಬಿಲ್ಲದ ನಾಲಗೆಯನ್ನು ಹರಿಬಿಟ್ಟಿದ್ದಾರೆ ಎಂದು ಆಕ್ರೋಶವನ್ನ ಹೊರಹಾಕಿದ್ದಾರೆ.
ವಿದೇಶೀಗರೊಂದಿಗೆ ಸೇರಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಹುನ್ನಾರವನ್ನು ತಿಳಿದುಕೊಂಡು ಜನರೆ ನಿಮಗೆ ಪಾಠ ಕಲಿಸಿ ಓಡಿಸುತ್ತಾರೆ.