ಚಿಕ್ಕಬಳ್ಳಾಪುರ: ಸಿಎಂ ಸಿದ್ದರಾಮಯ್ಯನವರಿಗೆ ಒಂದೊಂದು ಸಲ ತಿಕ್ಕಲು ಹಿಡಿಯುತ್ತದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸಿಎಂ ವಿರುದ್ದ ವಾಗ್ದಾಳಿಯನ್ನು ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಬೂಕರ್‌ ಅವಾರ್ಡ್‌ ಪುರಸ್ಕೃತೆ ಬಾನು ಮುಷ್ತಾಕ್‌ರನ್ನು ಆಯ್ಕೆ ಮಾಡಿರುವುದು ಮುಖ್ಯಮಂತ್ರಿಗಳ ನಿರ್ಧರವಲ್ಲ.ಬದಲಿಗೆ ಯಾರದ್ದೋ ಒತ್ತಾಯದಿಂದ ಮತ್ತು ಮತ್ಯಾರನ್ನು ಮೆಚ್ಚಿಸುವ ಉದ್ದೇಶದಿಂದ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ದಸರಾ ಹಬ್ಬವೆಂದರೆ ಶ್ರೇಷ್ಟ.ಮೊದಲಿನಿಂದಲೂ ನಿಯಮದಂತೆ ನಡೆದುಕೊಂಡು ಬಂದಿದೆ.ಆ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ರಾಜ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಸಿಎಂ ಸಿದ್ದರಾಮಯ್ಯನವರಿಗೆ ಕಷ್ಟಗಳು ಬಂದು ಕಾಡುತ್ತಿವೆ. ಸಾವಿರಾರು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಪಾಲಿಸಿ. ಯಾರನ್ನೋ ಮೆಚ್ಚಿಸುವ ಕಾರ್ಯವನ್ನು ಬಿಟ್ಟು ತಾಯಿ ಚಾಮುಂಡಿ ಮನಸ್ಸನ್ನು ಗೆಲ್ಲುವ ಕಡೆ ಗಮನ ಕೊಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನನಗೇನಾದರೂ ಬಾನು ಮುಷ್ತಾಕ್‌ ಸಿಕ್ಕರೇ ದಸರಾ ಉದ್ಘಾಟನೆಯಿಂದ ಹಿಂದೆ ಹೋಗಿ ಎಂದು ಮನವಿಯನ್ನು ಮಾಡುತ್ತೇನೆ. ತಾಯಿ ಚಾಮುಂಡಿ ಕೋಪಗೊಂಡರೆ, ನಮಗೂ ನಿಮಗೂ ಮತ್ತುರಾಜ್ಯಕ್ಕೂ ಗಂಡಾಂತರ.ದೇವರು ಎನ್ನುವುದು ಈ ಜಗತ್ತಿನಲ್ಲಿ ಇಲ್ಲದಿದ್ದರೆ ಮೋದಿ ಇಷ್ಟೊಂದು ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲವೆಂದು ಹೇಳಿದ್ದಾರೆ.

Leave a Reply

Your email address will not be published. Required fields are marked *