ಬೆಳಗಾವಿ: ನನ್ನನ್ನು ಮುಟ್ಟಿದ್ರೆ ಜನ ಸುಮ್ಮನೆ ಬಿಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಕೇಂದ್ರ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಈ ವಿಚಾರದ ಕುರಿತು ರಾಜ್ಯದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರನ್ನು ಯಾರಾದ್ರೂ ಮುಟ್ಟೋಕೆ ಆಗುತ್ತಾ? ಯಾರಾದ್ರೂ ಸಿಎಂ ಅವರನ್ನು ಟಚ್ ಮಾಡಿದ್ರೆ ಪೊಲೀಸ್ ಕೇಸ್ ದಾಖಲಿಸ್ತಾರೆ. ಸಿದ್ದು ಆ ಅರ್ಥದಲ್ಲಿ ಮಾತನಾಡಿರಬಹುದು. ಅವರು ಏನ್ ಮಾತನಾಡ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು, ಅವರವರ ಅಭಿಪ್ರಾಯ ತಿಳಿಸುವ ಎಲ್ಲಾ ಹಕ್ಕಿದೆ.ಆದರೆ ಜನರ ಭಾವನೆಗೆ ತದ್ವಿರುದ್ದವಾಗಿ, ದಕ್ಕೆ ತರುವ ಹಾಗೆ ಮಾತನಾಡುವುದು ಎಷ್ಟು ಸಮಂಜಸ ಎಂದು ಪ್ರಶ್ನೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಅನುಭವವುಳ್ಳ ರಾಜಕಾರಣಿ ನಿಮ್ಮನನು ಮುಟ್ಟೋಕೆ ಆಗುತ್ತಾ? ಸರ್ಕಾರದ ಕೆಲಸಗಳ ಬಗ್ಗೆ ಗಮನಹರಿಸಿ. ಜನರ ಏಳಿಗೆಗಾಗಿ ದುಡಿಯಬೇಕು. ಅವರು ಏನು ಹೇಳಿಕೆ ನೀಡಿದ್ದಾರೆಂಬುದನ್ನು ಅವರಿಗೆ ಬಿಡುತ್ತೇನೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.