ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ವಿಧಾನಸೌಧದ ಮುಂಭಾಗ “ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ” ಎಂಬ ನಾಮಕರಣದ ಅಡಿಯಲ್ಲಿ ನೂತನವಾಗಿ 65 ಅಂಬ್ಯುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿಂದು ವಿಧಾನಸೌಧದ ಮುಂಭಾಗದಲ್ಲಿ “ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ”ಯ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾಗಿ ಅಂಬ್ಯುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
ರಸ್ತೆ ಅಪಘಾತಗಳಾದಾಗ ಗಾಯಾಳುಗಳಿಗೆ ಅತೀ ಶೀಘ್ರದಲ್ಲಿ (ಸುವರ್ಣ ಸಮಯಾವಧಿ) ಅಂಬ್ಯುಲೆನ್ಸ್ ಸೇವೆ ಸಿಗಲಿ ಎಂದು ಈ ಮಹತ್ತರವಾದ ಕಾರ್ಯವನ್ನು ಆಯೋಜಿಲಾಗಿದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ನಡೆಯುವುದನ್ನು ನಿಯಂತ್ರಣ ಮಾಡಲು ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನುಕೈಗೊಳ್ಳಲು ಸರ್ಕಾರವೂ ಕರ್ನಾಟಕ ರಸ್ತೆ, ಸುರಕ್ಷತಾ ಪ್ರಾಧಿಕಾರದ ನಿಧಿಯಿಂದ 2024- 25 ನೇ ಸಾಲಿನಲ್ಲಿ 45 ಕೋಟಿ ರೂಗಳನ್ನು. ಅನುದಾನವನ್ನು ಒದಗಿಸಿದೆ ಎಂದು ಹೇಳಿದ್ದಾರೆ.