ಬೆಂಗಳೂರು: ಮುಖ್ಯಮಂತ್ರಿ ಆಕಾಂಕ್ಷಿ ನಾನು ಎನ್ನುವ ಆರ್.ವಿ.ದೇಶಪಾಂಡೆ ಅವರ ಹೇಳಿಕೆಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ʼಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಕುರ್ಚಿ ಖಾಲಿ ಇದ್ದಿದ್ದರೆ ಆ ವಿಷಯದ ಕುರಿತು ಮಾತನಾಡಬಹುದಿತ್ತು, ಸದ್ಯ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆʼ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಹಿರಿಯರಾದ ದೇಶಪಾಂಡೆಯವರು ಸಿಎಂ ಪಟ್ಟಕ್ಕೆ ಆಸೆಪಡುವುದು ತಪ್ಪಲ್ಲ. ಆದ್ರೆ ಮಾಧ್ಯಮಗಳ ಮುಂದೆ ಪ್ರಸ್ಥಾಪ ಮಾಡಬಾರದಿತ್ತು. ಹಿರಿಯರಾದ ಅವರಿಗೆ ಏನು ಗೌರವ ನೀಡಲಾಗುವುದೋ ಅದನ್ನು ನೀಡೋಣ ಎಂದಿದ್ದಾರೆ.