ಮೂರು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪೈನಲ್ ಮಾಡಿದೆ.ಬಿಜೆಪಿ-ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಘೋಷಿಸಿ ಮತ್ತೊಂದು ಕ್ಷೇತ್ರವನ್ನು ಉಳಿಸಿಕೊಂಡಿದ್ದು, ಎಲ್ಲರಲ್ಲೂ ಕುತೂಹಲವನ್ನು ತಡೆದಿಟ್ಟುಕೊಂಡಿದ್ದರು.ಶಿಗ್ಗಾವಿ ಕ್ಷೇತ್ರಕ್ಕೆ ಯಾರಾಗ್ತಾರೆ ಅಭ್ಯರ್ಥಿ ಎನ್ನುವುದನ್ನು ಕಾಂಗ್ರೆಸ್ ಗೋಪ್ಯವಾಗಿಟ್ಟಿತ್ತು, ಆದರೀಗ ಕಾಂಗ್ರೆಸ್ ಶಿಗ್ಗಾವಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದೆ.
ಕಾಂಗ್ರೆಸ್ ಪಕ್ಷದಿಂದ ಶಿಗ್ಗಾವಿಯಲ್ಲಿ ಕಣಕ್ಕೆ ಇಳಿಯಲು ಹಲವರು ರೆಡಿಯಾಗಿದ್ದರೂ, ಕೂಡಾ ಕಳೆದ ಸಲ ಬಸವರಾಜ ಬೊಮ್ಮಾಯಿಯವರ ವಿರುದ್ದವಾಗಿದ್ದ ಯಾಸೀರ್ ಅಹ್ಮದ್ ಖಾನ್ ಪಠಾಣ್‌ರನ್ನೇ ಕಣಕ್ಕೆ ಇಳಿಸಲು ನಿರ್ಧಾರ ಮಾಡಿದೆ.