ಬೆಂಗಳೂರು: ಇತ್ತೀಚೆಗೆ ಆನ್‌ಲೈನ್‌ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಬೈಜೂಸ್‌ ಟ್ಯೂಷನ್‌ ಸೆಂಟರ್‌ ಹೆಸರಲ್ಲಿ ಪೋಷಕರು ಲಕ್ಷ ಲಕ್ಷ ಕಳೆದುಕೊಂಡಿರುವ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ.

ರಾಮ್‌ ಕೈಲಾಶ್‌ ಎನ್ನುವ ವ್ಯಕ್ತಿಯೊಬ್ಬರು ಬೈಜೂಸ್‌ ಟ್ಯೂಷನ್‌ ಸೆಂಟರ್‌ಗೆ ಸೇರಿಸಿದ್ದರು. ಕೆಲ ದಿನಗಳ ನಂತರ ಸರಿಯಾಗಿ ಪಾಠ ಹೇಳಿಕೊಡುತ್ತಿಲ್ಲವೆಂದುಕಂಪ್ಲೆಂಟ್‌ ಮಾಡಿ ಹಣವನ್ನು ವಾಪಸ್‌ ಮಾಡುವಂತೆ ಹೇಳಿದ್ದರು. ಇದೇ ವೇಳೆ ಕಾರಾಣಾಂತರಗಳಿಂದ ಬೈಜೂಸ್‌ ಟ್ಯೂಷನ್‌ ಸೆಂಟರ್‌ ಬಂದ್‌ ಮಾಡಲಾಗಿತ್ತು, ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ವಂಚಕರು ನಿಮಗೆ ಹಣ ಕಳಿಸಲು ಟ್ರೈ ಮಾಡಿದೆವು ಆದರೆ ಹಣ ಸೆಂಡ್‌ ಆಗುತ್ತಿಲ್ಲ. ಒಂದು ಲಿಂಕ್‌ ಕಳಿಸ್ತೇವೆ ಅದನ್ನು ಕ್ಲಿಕ್‌ ಮಾಡಿ ಎಂದಿದ್ದಾರೆ.

ಹೇಗೊ ನಮ್ಮ ಹಣ ನಮಗೆ ವಾಪಸ್ಸು ಬರುತ್ತದೆ ಎಂದು ವಂಚಕರು ಕಳಿಸಿದ ಲಿಂಕ್‌ (restdesk.apk) ಕ್ಲಿಕ್‌ ಮಾಡುತ್ತಿದ್ದಂತೆ ಆಪ್‌ ಇನ್ಸ್ಟಾಲ್‌ ಆಗಿದೆ.ತಕ್ಷಣ ಅವರ ಅಕೌಂಟಿಂದ 1.30 ಲಕ್ಷ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಈ ವಿಷಯದ ಕುರಿತು ಕ್ರೈಂ ಠಾಣೆಗೂ ದೋರು ನೀಡಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಆನ್‌ಲೈನ್‌ ವಂಚಕರ ಜಾಲದ ಪತ್ತೆಗೆ ಬಲೆಯನ್ನು ಬೀಸಿದ್ದಾರೆ.

Leave a Reply

Your email address will not be published. Required fields are marked *