ಹಾವೇರಿ:ನೆನ್ನೆಯಷ್ಟೇ 3 ಕ್ಷೇತ್ರಗಳ ಚುನಾವನೆ ಮುಗಿದಿದೆ.ಆದರೆ ಶಿಗ್ಗಾಂವಿ ಉಪಚುನಾವಣೆ ಮುಗಿದ ಮಾರನೇ ದಿನವೇ ಕಾಲುವೆಗಳನ್ನು ಬ್ಯಾಲೆಟ್ ಪೇಪರ್ ಬಾಕ್ಸ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಅಸ್ಪದವಾಗಿದೆ.
ಬ್ಲಾಲೆಟ್ ಪೇಪರ್ ಬಾಕ್ಸ್‌ಗಳು ಹಳೆಯವಾಗಿದ್ದು ಉಪಚುನಾವಣೆಗೂ ಈ ಬಾಕ್ಸ್‌ಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.ಮತ್ತೊಂದೆಡೆ ಪೊಲೀಸರು ಈ ವಿಷಯದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಶಿಗ್ಗಾಂವಿ ಉಪಚುನಾವಣೆಯ ಮತದಾನ ನೆನ್ನೆಯಷ್ಟೇ ಮುಗಿದಿದೆ. ಮಾರನೇ ದಿನವೇ ಹಾವೇರಿ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಖಾಲಿ ಜಾಗದ ಕಾಲುವೆಯಲ್ಲಿ ಈ ಬ್ಯಾಲೆಟ್ ಪೇಪರ್ ಬಾಕ್ಸ್‌ಗಳು ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ನೆನ್ನೆ ನಡೆದ ಉಪಚುನಾವಣೆಯಲ್ಲಿ ಇವಿಎಂ ಬಳಸಲಾಗಿತ್ತು, ಆದ್ದರಿಂದ ಈ ಬ್ಯಾಲೆಟ್ ಪೇಪರ್ ಬಾಕ್ಸ್‌ಗಳಿಗೂ ಬೈಎಲೆಕ್ಷನ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಳ್ಳಿ