ನವದೆಹಲಿ: 3 ರಾಜ್ಯಗಳ ಬೈಎಲೆಕ್ಷನ್ ದಿನಾಂಕವನ್ನು ಚುನಾವಣಾ ಆಯೋಗವು ಬದಲಾಯಿಸಿದೆ ಎಂದು ತಿಳಿದುಬಂದಿದೆ.
ನವೆಂಬರ್ 13ರಂದು ನಡೆಯಲಿರುವ ಉಪ ಚುನಾವಣೆಯನ್ನು 20ಕ್ಕೆ ನಿಗದಿ ಮಾಡಿದೆ.ಏಕೆಂದರೆ 48 ವಿಧಾನಸಭಾ ಕ್ಷೇತ್ರಗಳು ಮತ್ತು 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಚುನಾವಣಾ ಆಯೋಗ ಘೋಷಣೆ ಮಾಡಿತ್ತು. ಆದರೀಗ ಉತ್ತರ ಪ್ರದೇಶ, ಪಂಜಾಬ್, ಮತ್ತು ಕೇರಳದಲ್ಲಿ ನಡೆಯುವ ಚುನಾವಣಾ ದಿನಾಂಕವನ್ನು ಬದಲಾವಣೆ ಮಾಡಿದೆ ಎನ್ನಲಾಗಿದೆ.
ಕೇರಳದ ಪಾಲಕ್ಕಾಡ್, ಪಂಜಾಬಿನ ಡೇರಾ ಬಾರಾ ನಾನಕ್, ಛಬೆವಾಲ್, ಗಿಡ್ಡರ್ಬಾಹಾ, ನರ್ನಾಲಾ, ಉತ್ತರ ಪ್ರದೇಶದ ಮೀರಾಪುರ, ಕುಂದರ್ಕಿ, ಘಾಸಿಯಾಬಾದ್, ಖೇರ್ ,ಕರ್ಹಾಲ್, ಸಿಶಾಮೌ,ಪುಲ್ಪರ್, ಕತೇಹಾರಿ, ಮತ್ತು ಮಜವಾನ್ ಕ್ಷೇತ್ರಗಳಲ್ಲಿ ನವೆಂಬರ್ 20ರಂದು ಉಪಚುನಾವೆಣೆ ನಡೆಸಲು ನಿರ್ಧಾರ ಮಾಡಿದೆ ಎನ್ನಲಾಗಿದೆ.