ದೇವನಹಳ್ಳಿ: ಕರಗ ಮಹೊತ್ಸವವನ್ನು ತಿಗಳ ಜನಾಂಗದವರು ಅನಾದಿ ಕಾಲದಿಂದ ಅಚ್ಚುಕ್ಕಾಗಿ ಮತ್ತು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರತ್ತಿದ್ದು, ಒಮ್ಮತದಿಂದ ಎಲ್ಲರು ಕರಗ ಮಹೋತ್ಸವ ನಡೆಸುವಂತೆ ತಹಶೀಲ್ದಾರ್ ಶಿವರಾಜ್ ಕರೆ ನೀಡಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಮಾ. 7ರಂದು ಬೂದಿಗೆರೆಯಲ್ಲಿ ನಡೆಯುವ ಕರಗ ಮಹೋತ್ಸವದ ಅಂಗವಾಗಿ ಕರೆಯಲಾಗಿದ್ದ ಶಾಂತಿ ಸಂಧಾನ ಸಭೆಯ ಬಳಿಕ ಮಾತನಾಡಿ, ತಿಗಳ ಜನಾಂಗದವರ ಆರಾಧ್ಯ ದೈವಗಳಾದ ಧರ್ಮರಾಯಸ್ವಾಮಿ ದ್ರೌಪತಮ್ಮ, ಅನೇಕ ಆಚಾರ ನೀತಿ ಸಂಪ್ರದಾಯಗಳು ಜಾರಿಯಲ್ಲಿದೆ. ಇವರು ಮಾರ್ಚ್ ತಿಂಗಳ ಹುಣ್ಣಿಮೆ ದಿನದಂದೇ ಕರಗ ಮಹೋತ್ಸವ ನಡೆಸುವ ಮಾಹಿತಿಯಿದೆ. ಬೂದಿಗೆರೆಯಲ್ಲಿ ಈ ಹಿಂದೆ ತಿಗಳ ಸಮುದಾಯದಲ್ಲೇ ಎರಡು ಗುಂಪುಗಳಿತ್ತು, ಈ ಬಾರಿ ಮತ್ತೊಂದು ಗುಂಪು ತಯಾರಾಗಿದ್ದು ಮೂರು ಗುಂಪಿನವರನ್ನು ಶಾಂತಿ ಸಂಧಾನಕ್ಕೆ ಸಭೆಯಲಾಗಿತ್ತು. ಯಾರಿಂದಲೂ ಒಮ್ಮತದ ನಿರ್ಧಾರ ವ್ಯಕ್ತವಾಗದೆ ಇರುವುದರಿಂದ ಜಿಲ್ಲಾಧಿಕಾರಿಗಳಿಗೆ ಈ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಕಾನೂನು ಸುವ್ಯವಸ್ಥೆಗೆ ಕದಡುವಂತಹವರು ಯಾರೇ ಅದರೂ ಮುಲಾಜಿಲ್ಲದೆ, ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದರು.
ಬೂದಿಗೆರೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಮೂರು ಗುಂಪುಗಳ ಪ್ರತಿಷ್ಠೆಯಾಟಕ್ಕೆ ಕರಗ ಮಹೋತ್ಸವಕ್ಕೆ ಅಡ್ಡಿಯಾಗಿರುವುದು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಅಂತಿಮ ಆದೇಶಕ್ಕೆ ತೆರೆಬೀಳಲಿದೆ.

ಈ ಸಂದರ್ಭದಲ್ಲಿ ತಿಗಳ ಸಮುದಾಯದ ಮುಖಂಡರಾದ ಮಂದಾರ ಮುನಿರಾಜು ಬಿಜೆಪಿ ಮುಖಂಡ ನಾರಾಯಣ ಸ್ವಾಮಿ, ಗಣೇಶಪ್ಪ, ಗಂಟೆ ಪೂಜಾರಿ ನಾರಾಯಣಸ್ವಾಮಿ , ಶಿವರಾಜ್, ಮಂಜುನಾಥ್ , ಶ್ರೀನಿವಾಸ್ , ಮುನಿಕೃಷ್ಣ, ಹರೀಶ್, ಕೃಷ್ಣಪ್ಪ, ಲೋಕೇಶ್, ರಾಜೇಂದ್ರಪ್ಪ, ರಾಮಚಂದ್ರ, ಶ್ರೀಧರ್, ರವಿ, ವೆಂಕಟೇಶ್, ಚಿನ್ನಸ್ವಾಮಿ, ಮುನಿರಾಜು ಸೇರಿದಂತೆ ನೂರಾರು ಸಮುದಾಯದ ಪದಾಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *