ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಘಟನೆಗೆ ಬಿಜೆಪಿಯೇ ಕಾರಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೇರವಾಗಿ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಪ್ರಕರಣದಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.ಯಾರ ಮನೆಯ ಮುಂದೆ ಬ್ಯಾನರ್ ಹಾಕಿದ್ರೆ ಅವರಿಗೇನು ಸಮಸ್ಯೆ? ಬಿಜೆಪಿಯವರು ನಮ್ಮ ಮನೆ ಮುಂದೆ, ಸಿಎಂ ಸಿದ್ದರಾಮಯ್ಯನವರ ಮನೆಯ ಮುಂದೆ ಬ್ಯಾನರ್ ಹಾಕ್ತಾರೆ.ಗೌವರ್ನಮೆಂಟ್ ರೋಡಲ್ಲಿ ಕಾರ್ಯಕ್ರಮ ನಡೆಸಲು ಬ್ಯಾನರ್ ಹಾಕಿರುವುದಷ್ಟೇ . ನೆನ್ನೆ ನಡೆದ ಘಟನೆಯಿಂದ ನಮ್ಮ ಕಾರ್ಯಕರ್ತರನ್ನು ಕಳೆದುಕೊಂಡಿರುವುದಕ್ಕೆ ಬಿಜೆಪಿ ಕಾರಣ ಎಂದು ಆರೋಪ ಮಾಡಿದ್ದಾರೆ.
ಬಳ್ಳಾರಿಗೆ ಜನಾರ್ಧನ ರೆಡ್ಡಿ ಬರುವವರೆಗೂ ಒಂದು ಗಲಾಟೆ ಕೂಡ ನಡೆದಿರಲಿಲ್ಲ. ಅವರು ಬಂದ ನಂತರ ಶುರುವಾಗಿದೆ.ನಾನು ನಮ್ಮ ಶಾಸಕರ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
